ಸವಳಂಗದ ದೊಡ್ಡಕೆರೆಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ 25 ಸಾವಿರ ಮೀನಿನ ಮರಿಗಳನ್ನು ಬಿತ್ತನೆ ಮಾಡಲಾಯಿತು. 
ಶಿವಮೊಗ್ಗ

ಸವಳಂಗ ಕೆರೆಯಲ್ಲಿ 25 ಸಾವಿರ ಮೀನಿನ ಮರಿ ಬಿತ್ತನೆ । Fish hatching

ಶಿವಮೊಗ್ಗ: ಶಿವಮೊಗ್ಗ-ದಾವಣಗೆರೆ ಜಿಲ್ಲೆಗಳ ಗಡಿ ಭಾಗದ ಸವಳಂಗ(Savalanga)ದ ದೊಡ್ಡಕೆರೆಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ 25 ಸಾವಿರ ಮೀನಿನ ಮರಿ(Fish)ಗಳನ್ನು ಬಿತ್ತನೆ ಮಾಡಲಾಯಿತು.
ಬೆಂಗಳೂರಿನ ಐಸಿಎಆರ್(ICAR)-ಕೇಂದ್ರೀಯ ಸಿಹಿನೀರು ಜಲಕೃಷಿ ಸಂಸ್ಥೆಯ ಪ್ರಾದೇಶಿಕ ಸಂಶೋಧನಾ ಕೇಂದ್ರದಿಂದ ಬುಧವಾರ ಸವಳಂಗ ಕೆರೆಯ ಆವರಣದಲ್ಲಿ ಸ್ಥಳೀಯ ಮೀನು ತಳಿಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿಜ್ಞಾನಿಗಳು ಕೇಂದ್ರದಲ್ಲಿ ಬೆಳೆಸಲಾದ ಕೆಮ್ಮೀನಿನ (ಲ್ಯಾಬಿಯೊ ಫಿಂಬ್ರಿಯೇಟಸ್) ಮರಿಗಳನ್ನು ಕೆರೆ(Lake)ಯಲ್ಲಿ ಸಾಕಣೆಗೆ ಬಿತ್ತನೆ ಮಾಡಲಾಯಿತು.
ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು,ಶಿವಮೊಗ್ಗ ಮತ್ತು ದಾವಣಗೆರೆಯ ಮೀನುಗಾರಿಕೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಮೀನುಗಾರಿಕೆ ಇಲಾಖೆ ಶಿವಮೊಗ್ಗ ವಲಯದ ಜಂಟಿ ನಿರ್ದೇಶಕ ಜಿ.ಎಸ್.ಷಡಾಕ್ಷರಿ, ಸವಳಂಗದ ಮಾರಿಕಾಂಬ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಕಾಳಪ್ಪ ಸೇರಿ ಸಂಫದ 50 ಸದಸ್ಯರು ಪಾಲ್ಗೊಂಡಿದ್ದರು.