ಶಿರಾಳಕೊಪ್ಪದಲ್ಲಿ ಮಣ್ಣು ಪರೀಕ್ಷಾ ಕೇಂದ್ರವನ್ನು ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಡಾ. ಕಿರಣ್‌ಕುಮಾರ್, ಕೆ.ಎಸ್.ಗುರುಮೂರ್ತಿ ಇತರರಿದ್ದರು. 
ಶಿವಮೊಗ್ಗ

ಬಿತ್ತನೆಗೂ ಮುನ್ನ ಮಣ್ಣಿನ ಪರೀಕ್ಷೆ ಮುಖ್ಯ

ಸೋಮಶೇಖರ ಎನ್
ಶಿರಾಳಕೊಪ್ಪ: ರೈತರು ಜಮೀನಿನ ಮಣ್ಣಿನ ಆರೋಗ್ಯವನ್ನು ವೈಜ್ಞಾನಿಕವಾಗಿ ಅರಿತು ಬೆಳೆ ಹಾಗೂ ಗೊಬ್ಬರ ಆಯ್ಕೆ ಮಾಡಿಕೊಳ್ಳಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಶಿರಾಳಕೊಪ್ಪದ ಉಡುತಡಿ ರೈತ ಉತ್ಪಾದಕ ಸಂಸ್ಥೆ ಆವರಣದಲ್ಲಿ ನಿರ್ಮಿಸಿದ ಆಧುನಿಕ ಮಣ್ಣು ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಸಮೃದ್ಧ ಮಣ್ಣು, ಸುಸ್ಥಿರ ಕೃಷಿ ಎನ್ನುವುದು ನಮ್ಮ ಆಶಯ. ರೈತರು ತಮ್ಮ ಜಮೀನಿನ ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸಿ, ಅದಕ್ಕೆ ಅನುಗುಣವಾಗಿ ವೈಜ್ಞಾನಿಕ ಕೃಷಿ ಅಳವಡಿಸಿಕೊಂಡರೆ ಉತ್ಪಾದನಾ ವೆಚ್ಚ ಕಡಿಮೆಯಾಗಿ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ನಿಮ್ಮ ಮಣ್ಣನ್ನು ತಿಳಿಯಿರಿ ಎಂಬ ಧ್ಯೇಯದೊಂದಿಗೆ ಸ್ಥಾಪನೆಯಾಗಿರುವ ಕೇಂದ್ರ ರೈತರಿಗೆ ತಾಂತ್ರಿಕ ಹಾಗೂ ಡಿಜಿಟಲ್ ಕೃಷಿ ಸೌಲಭ್ಯವನ್ನು ತಳಮಟ್ಟದಲ್ಲಿ ತಲುಪಿಸಲಿದೆ. ಶಿರಾಳಕೊಪ್ಪ ಹಾಗೂ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸಂಸದ ರಾಘವೇಂದ್ರ ಅವರು ರೈತರ ಮೂಲ ಅಗತ್ಯಗಳಿಗೂ ಆದ್ಯತೆ ನೀಡಿದ್ದಾರೆ. ಮಣ್ಣು ಪರೀಕ್ಷಾ ಕೇಂದ್ರಕ್ಕಾಗಿ ಅನುದಾನ ನೀಡಿರುವುದು ಅವರ ರೈತಪರ ಕಾಳಜಿಯ ಪ್ರತೀಕ ಎಂದರು.
 ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮಹೇಶ್ ಹುಲ್ಮಾರ್, ವ್ಯವಸ್ಥಾಪಕ ನಿರ್ದೇಶಕ ಅನೂಪ್, ಜಂಟಿ ಕೃಷಿ ನಿರ್ದೇಶಕ ಡಾ. ಕಿರಣ್‌ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಚನ್ನವೀರಪ್ಪ ಇತರರಿದ್ದರು.