ಶಿಕಾರಿಪುರದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಇಒ ಲೋಕೇಶ್ವರಪ್ಪ ಅವರಿಗೆ ಗಿಡ ನೀಡಲಾಯಿತು. ಬಸವರಾಜ್, ಕೆ.ಎಸ್.ಹುಚ್ರಾಯಪ್ಪ, ಮೇಘಾ ಇತರರಿದ್ದರು.
ಶಿಕಾರಿಪುರ: ಸಂಘ ಸಂಸ್ಥೆಗಳ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ ಎಂದು ಬಿಇಒ ಲೋಕೇಶ್ವರಪ್ಪ ಹೇಳಿದರು.
ಬಳಿಗಾರ್ ಫೌಂಡೇಷನ್‌ನಿಂದ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಜತೆಯಲ್ಲಿ ಔಷಧಯುಕ್ತ ಗಿಡಗಳನ್ನು ಬೆಳೆಸುವಂತೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಬಳಿಗಾರ್ ಫೌಂಡೇಷನ್ ಗೌರವಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ ಮಾತನಾಡಿ, ಸಾಲುಮರದ ತಿಮ್ಮಕ್ಕ ನಾಡಿನ ಎಲ್ಲರಿಗೂ ಸ್ಫೂರ್ತಿ. ಶಿಕಾರಿಪುರಕ್ಕೆ ತಿಮ್ಮಕ್ಕ ಅವರು ಬಂದ ವೇಳೆಯಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಿಸುವಂತೆ ಸಂದೇಶ ನೀಡಿದ್ದರು ಎಂದರು. ಫೌಂಡೇಷನ್ ಅಧ್ಯಕ್ಷ ಇ.ಎಚ್.ಬಸವರಾಜ್, ಪಾರು ಸ್ವಾಮಿ, ಮೇಘಾ, ಭೂಮಿಕಾ, ಪದಾಧಿಕಾರಿಗಳು ಇದ್ದರು.