ಸಾಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಎಸ್.ನಾಗರಾಜ್ ಅವರ ನೆನಪಿನ ಸಂಪುಟವನ್ನು ಪ್ರಾಧ್ಯಾಪಕ ಸುರೇಶ್ ಜಂಬಾನಿ ಬಿಡುಗಡೆಗೊಳಿಸಿದರು. ಎಚ್.ಬಿ.ರಾವೇಂದ್ರ, ಲಲಿತಮ್ಮ, ಮೋಹನ್ ಮೂರ್ತಿ, ೆಡ್ರಿಕ್ ಸಲ್ಡಾನ ಇತರರಿದ್ದರು.
- ಎಸ್.ಎಸ್.ನಾಗರಾಜ್ ಅವರ ನೆನಪಿನ ಸಂಪುಟ ಬಿಡುಗಡೆ
- ಪ್ರಾಧ್ಯಾಪಕ ಸುರೇಶ್ ಜಂಬಾನಿ ಹೇಳಿಕೆ
- ಆದರ್ಶಮಯ ಬದುಕು ರೂಪಿಸಿದ ಹೋರಾಟಗಾರ
ಸಾಗರ: ಭಾರತದಲ್ಲಿ ದೌರ್ಜನ್ಯ ನಿರಂತರವಾಗಿದ್ದು, ಹೋರಾಟದ ಕಾರಣದಿಂದ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ಸಾಧ್ಯವಾಗಿದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಸುರೇಶ್ ಜಂಬಾನಿ ಹೇಳಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಲಾ ಅನ್ವೇಷಣೆ ಮತ್ತು ಕರ್ನಾಟಕ ಮುನ್ನಡೆ ಸಂಟನೆ ಆಯೋಜಿಸಿದ್ದ ಹೋರಾಟಗಾರ ಎಸ್.ಎಸ್.ನಾಗರಾಜ್ ಅವರ ನೆನಪಿನ ಸಂಪುಟ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿ, ಇವರ ಆದರ್ಶಮಯ ಹೋರಾಟ ಸಮಾಜದಲ್ಲಿ ಹಲವು ಬದಲಾವಣೆ ಮೂಡಲು ಕಾರಣವಾಯಿತು ಎಂದು ತಿಳಿಸಿದರು.
ಹೋರಾಟಗಾರ ಪ್ರೊ. ರಾಚಪ್ಪ ಮಾತನಾಡಿ, ಜನ ಚಳವಳಿಗಳ ಮೂಲಕ ಮನುಷ್ಯತ್ವದ ಗಾಳಿಯನ್ನು ಕರ್ನಾಟಕದಲ್ಲಿ ಬೀಸುವಂತೆ ಮಾಡಿತು ಡಿಎಸ್ಎಸ್. ಆದರೆ ಅಧ್ಯಾತ್ಮವನ್ನು ಸರಕು ಮಾಡಿಕೊಂಡ ಒಂದು ವರ್ಗ ಮತ್ತೆ ಮನುಷ್ಯನ ನತೆ, ಗೌರವವನ್ನು ಜಾತಿ, ಧರ್ಮದ ಹೆಸರಿನಲ್ಲಿ ಬೆವರನ್ನು ಸುರಿಸಿ ದುಡಿಯುವ ಜನರನ್ನು ಅಮಾನ್ಯಗೊಳಿಸುತ್ತಿದೆ ಎಂದು ತಿಳಿಸಿದರು.
ಜನ ಚಳವಳಿ ಹುನ್ನಾರವನ್ನು ನಿರಂತರವಾಗಿ ಮುರಿಯುತ್ತಲೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತದ ಕೆಲ ದಲಿತರು ಸ್ವಾಭಿಮಾನಕ್ಕಾಗಿ ಬೇರೆ ಧರ್ಮವನ್ನು ಸೇರಿಕೊಂಡರು. ಕರ್ನಾಟಕದ ಹಲವು ಸಾಮಾಜಿಕ ಬದಲಾವಣೆಗೆ ಸಾಗರದ ದಲಿತ ಸಂರ್ಷ ಸಮಿತಿ ಹೋರಾಟ ಬಹುಮುಖ್ಯ ಪಾತ್ರವಹಿಸಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಎಚ್.ಬಿ.ರಾವೇಂದ್ರ ಮಾತನಾಡಿ, ಜೆನ್ಜೀ ತರಹದ ಹೋರಾಟ ಈ ಹೊತ್ತಿನ ಹೋರಾಟದ ಸಂಟನೆಗಳಿಗೆ ಹೊಸ ನುಡಿಗಟ್ಟು ಕಲಿಸಿದೆ ಎಂದು ತಿಳಿಸಿದರು. ನಗರಸಭೆ ಮಾಜಿ ಅಧ್ಯೆ ಲಲಿತಮ್ಮ, ಕಲಾ ಅನ್ವೇಷಣೆ ಸಂಪಾದಕ ಮೋಹನ್ ಮೂರ್ತಿ, ದಲಿತ ಮುಖಂಡ ೆಡ್ರಿಕ್ ಸಲ್ಡಾನ, ವಸಂತ್ ಕುಗ್ವೆ, ಅಣ್ಣಪ್ಪ ಕೆಳದಿಪುರ, ರಾಜಪ್ಪ ಜನ್ನೆಹಕ್ಲು, ಲಣ ಕುಗ್ವೆ ಇದ್ದರು.