ಸಾಗರದಲ್ಲಿ ಆಯೋಜಿಸಿದ್ದ ಪ್ರಾಣ ಪದ್ಮಿನಿ ನಾಟಕ ಪ್ರದರ್ಶನವನ್ನು ತಹಸೀಲ್ದಾರ್ ಡಾ. ಆರ್.ಪ್ರತಿಭಾ ಉದ್ಘಾಟಿಸಿದರು. ದೇವೇಂದ್ರ, ಗುರುಮೂರ್ತಿ, ಸತೀಶ್ ಶೆಣೈ, ಎಂ.ವಿ.ಪ್ರತಿಭಾ ಇದ್ದರು. 
ಶಿವಮೊಗ್ಗ

ಸಾಮಾಜಿಕ ಜಾಗೃತಿ ಮೂಡಿಸುವ ರಂಗಭೂಮಿ

ಸಾಗರ: ಸಮಾಜ ಜಾಗೃತಿಗೊಳಿಸುವ ಶಕ್ತಿ ರಂಗಭೂಮಿಗೆ ಇದೆ. ರಂಗಕಲೆ ಮೂಲಕ ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸಬಹುದು ಎಂದು ತಹಸೀಲ್ದಾರ್ ಡಾ. ಆರ್.ಪ್ರತಿಭಾ ಹೇಳಿದರು.
ಸ್ಪಂದನ ತಂಡದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಾಣ ಪದ್ಮಿನಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ರಂಗಭೂಮಿ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಹವ್ಯಾಸಿ ರಂಗಭೂಮಿ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅನೇಕ ರಂಗ ಪ್ರಯೋಗಗಳ ಮೂಲಕ ಸಮಾಜವನ್ನು ಹತ್ತಿರದಿಂದ ನೋಡಲು ಸಾಧ್ಯ ಎಂದರು.
ಮಂಜುನಾಥ್ ಬಡಿಗೇರ್ ನಿರ್ದೇಶನದಲ್ಲಿ ಸ್ಪಂದನಾ ತಂಡದವರು ‘ಪ್ರಾಣ ಪದ್ಮಿನಿ’ ನಾಟಕ ಪ್ರದರ್ಶನ ನೀಡಿದರು. ರಂಗಕರ್ಮಿ ದೇವೇಂದ್ರ, ಗುರುಮೂರ್ತಿ, ಸತೀಶ್ ಶೆಣೈ, ಎಂ.ವಿ.ಪ್ರತಿಭಾ, ಜೀವನ್ಮುಖಿ ತಂಡದ ಉಷಾರಾಣಿ, ಜ್ಯೋತಿ, ಮಮತಾ ಇದ್ದರು.