ಭದ್ರಾವತಿಯಲ್ಲಿ ಆರ್​ಎಸ್​ಎಸ್​ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಉಮೇಶ್​, ಕಾ.ಶಂ.ಶ್ರೀಧರ್​ ಇದ್ದರು. 
ಶಿವಮೊಗ್ಗ

ಸಮಾಜ ಜಾಗೃತಿ ಆರ್​ಎಸ್​ಎಸ್​ ಧ್ಯೇಯ

ಪ್ರಮುಖ ಮುಖ್ಯಾಂಶಗಳು

  • ಪ್ರಮುಖ ನಾಗರಿಕರ ಗೋಷ್ಠಿ
  • ವಿದ್ಯಾರ್ಥಿ ಪ್ರಮುಖ್​ ಉಮೇಶ್​ ಹೇಳಿಕೆ
  • ಸಮಾಜ ಜಾಗೃತಿ ಆರ್​ಎಸ್​ಎಸ್​ ಧ್ಯೇಯ
ಭದ್ರಾವತಿ: ಸಮಾಜವನ್ನು ಸಮಯ ಸಂದರ್ಭಕ್ಕೆ ಅನುಗುಣವಾಗಿ ಜಾಗೃತವನ್ನಾಗಿಡುವ ಸಂಟನಾತ್ಮಕವಾದ ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂವು ನೂರು ವರ್ಷಗಳ ಕಾಲ ನಿರಂತರವಾಗಿ ಮಾಡುತ್ತ ಇದೀಗ 101ನೇ ವರ್ಷಕ್ಕೆ ಪ್ರವೇಶಿಸಿದೆ ಎಂದು ಆರ್​ಎಸ್​ ಎಸ್​ನ ರಾಜ್ಯ ವಿದ್ಯಾರ್ಥಿ ಪ್ರಮುಖ್​ ಉಮೇಶ್​ ಹೇಳಿದರು.
ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್​ಎಸ್​ಎಸ್​ ಕೇವಲ ಹಿಂದೂ ಸಂಟನೆ ಮಾತ್ರವಲ್ಲ. ಸಮಾಜದಲ್ಲಿನ ಎಲ್ಲ ಲೋಪಗಳನ್ನೂ ತಿದ್ದುಪಡಿ ಮಾಡಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಿಸುವ ಗುರಿ ಹೊಂದಿದೆ. ಧರ್ಮದ ಬೋಧನೆಯ ಮೂಲಕ ಜಗತ್ತಿಗೆ ಸಂಸ್ಕಾರ ಕೊಟ್ಟ ದೇಶ ಭಾರತ. ಅದರಿಂದಾಗಿಯೇ ಇಲ್ಲಿ ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ ಎಂದರು.
ಬ್ರಿಟಿಷರು ನಿರಂತರವಾಗಿ ದೇಶದ ಇತಿಹಾಸ ತಿರುಚುವ, ಜನರನ್ನು ಒಡೆಯುವ ಕಾರ್ಯ ಮಾಡಿದರು. ಇನ್ನೊಂದು ಕಡೆ ಲಾರ್ಡ್​ ಮೆಕಾಲೆ ದೇಶದ ಶಿಕ್ಷಣ ವ್ಯವಸ್ಥೆ ಹಾಳುಗೆಡವುವ ಸಂಚು ರೂಪಿಸಿ, ಸ್ವಾತಂತ್ರ್ಯದ ದಿಕ್ಕನ್ನು ತಪ್ಪಿಸುವ ಕಾರ್ಯ ಮಾಡಿದರು. ಈ ಸಂಚನ್ನು ದೇಶದ ಜನರಿಗೆ ತಿಳಿಸುವ ಕಾರ್ಯ ಚಟುವಟಿಕೆಯಲ್ಲಿ ಆರ್​ಎಸ್​ಎಸ್​ ತೊಡಗಿಕೊಂಡಿದೆ. ಬಾಲಗಂಗಾಧರ ತಿಲಕ್​ ಅವರು ಶಿವಾಜಿ ಜಯಂತಿ ಹಾಗೂ ಗಣಪತಿ ಉತ್ಸವವನ್ನು ಸಾರ್ವಜನಿಕ ಉತ್ಸವವನ್ನಾಗಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದರು. ಇದರ ಪರಿಣಾಮ ದೇಶದಾದ್ಯಂತ ಸಾರ್ವಜನಿಕರು ಈ ಉತ್ಸವದ ಭಾಗಗಳಾದರು. ಇದು ಬ್ರೀಟಿಷರಿಗೆ ತಲೆನೋವು ತಂದಿತು ಎಂದು ವಿವರಿಸಿದರು.
ನಮ್ಮ ರಾಷ್ಟ್ರ ಧರ್ಮ ಪ್ರಣಿತ ರಾಷ್ಟ್ರವಾಗಿರುವ ಕಾರಣ ಧರ್ಮವನ್ನು ಉಳಿಸಲೇಬೇಕು. ಅದು ಮಾನವ ಧರ್ಮವಾಗಿದೆ. ಯಾರಿಗೂ ನೋವನ್ನು ಉಂಟು ಮಾಡಬಾರದು, ಒಳ್ಳೆಯದನ್ನು ಮಾಡಬೇಕು ಎಂಬ ಭಾವನೆಯೇ ಧರ್ಮ. ಇದು ಪೂಜಾ ಪದ್ಧತಿಯಲ್ಲ. ಬದಲಾಗಿ ಸಾಮಾಜಿಕ ನಡವಳಿಕೆ ಎಂದರು.
ಆರ್​ಎಸ್​ಎಸ್​ನ ಕರ್ನಾಟಕ ದಣ ಪ್ರಾಂತ ಸಹ ವ್ಯವಸ್ಥಾ ಪ್ರಮುಖ್​ ಕಾ.ಶಂ.ಶ್ರೀಧರ್​, ಮಧುಕರ್​, ಡಿ.ಎ.ರಂಗನಾಥ್​, ಡಾ. ದತ್ತಾತ್ರಿ ಇದ್ದರು. ಸಂವಾದದಲ್ಲಿ ನೂರಾರು ನಾಗರಿಕರು ಪಾಲ್ಗೊಂಡಿದ್ದರು.