ಸಾಗರದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಗಣೇಶ್ ಪ್ರಸಾದ್, ಎಸ್.ಬಿ.ರಘುನಾಥ್, ಕೆ.ಎಸ್.ಪ್ರಶಾಂತ್, ಸವಿತಾ ವಾಸು ಇತರರಿದ್ದರು. 
ಶಿವಮೊಗ್ಗ

ಅನರ್ಹರಿಗೆ ಎಸ್‌ಐಆರ್ ಎಚ್ಚರಿಕೆಯ ಗಂಟೆ | Comprehensive voter list revision

ಸಾಗರ: ಕಾನೂನು ಮೀರಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದವರಿಗೆ ಎಸ್‌ಐಆರ್ ಎಚ್ಚರಿಕೆಯ ಗಂಟೆ. ಕಾನೂನು ಪ್ರಕಾರ ಮತದಾರರ ಪಟ್ಟಿಯಲ್ಲಿ ಹೆಸರಿದ್ದವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸಾಗರದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಎಸ್‌ಐಆರ್ ಪೂರಕವೇ ಹೊರತು ಮಾರಕವಲ್ಲ ಎಂದು ಹೇಳಿದರು.
ಪಶ್ಚಿಮ ಬಂಗಾಳ ಸೇರಿ ಅನೇಕ ರಾಜ್ಯಗಳಲ್ಲಿ ಅಲ್ಲಿನ ಮುಖ್ಯಮಂತ್ರಿಗಳು, ಅಧಿಕಾರಿಗಳು ಹೊರದೇಶದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಂಡು ಚುನಾವಣೆ ಗೆಲ್ಲುತ್ತ ಬಂದಿದ್ದರು. ಆದರೆ ಕೇಂದ್ರ ಸರ್ಕಾರ ಜನರಿಗೆ ಮೂಲ ಸೌಲಭ್ಯ ಪರಿಣಾಮಕಾರಿಯಾಗಿ ತಲುಪಿಸಲು, ಅಭಿವೃದ್ಧಿಗೆ ಪೂರಕ ಸಿದ್ಧತೆ ನಡೆಸಿಕೊಳ್ಳಲು ಎಸ್‌ಐಆರ್ ಜಾರಿಗೆ ತಂದಿದೆ. ಸಮಗ್ರ ಪಟ್ಟಿ ಪರಿಷ್ಕರಣೆ ಕುರಿತು ವಿಪಕ್ಷಗಳು ಮಾಧ್ಯಮದ ಎದುರು ಹೇಳಿಕೆ ನೀಡುತ್ತಿವೆಯೇ ಹೊರತು ನ್ಯಾಯಾಲಯಕ್ಕೆ ಹೋಗುತ್ತಿಲ್ಲ ಎಂದರು.
ರಾಜ್ಯ ಸರ್ಕಾರದಲ್ಲಿ ಈತನಕ 1.25 ಲಕ್ಷ ಸತ್ತವರ ಹೆಸರಿನಲ್ಲಿ ಗೃಹಲಕ್ಷ್ಮಿ ಹಣವನ್ನು ತಿಂದಿದ್ದಾರೆ. ಯಾರು ತಿಂದಿದ್ದಾರೆ ಎನ್ನುವ ತನಿಖೆ ನಡೆಯಬೇಕಿದೆ. ಮೂರು ವರ್ಷದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಜನ ಅಭಿವೃದ್ಧಿ ನಿರೀಕ್ಷೆ ಮಾಡಿದ್ದರು. ಆದರೆ ಭ್ರಮನಿರಸನ ಉಂಟಾಗಿದೆ. ಹೊಸ ಮುಖ್ಯಮಂತ್ರಿಗಳ ಆಡಳಿತದ ಬಗ್ಗೆ ಜನ ನಿರೀಕ್ಷೆ ಇರಿಸಿಕೊಂಡಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಗಣೇಶ್ ಪ್ರಸಾದ್, ಟಿ.ಡಿ.ಮೇಘರಾಜ್, ಕೆ.ಎಸ್.ಪ್ರಶಾಂತ್, ಮೈತ್ರಿ ಪಾಟೀಲ್, ಸಂತೋಷ್ ಶೇಟ್, ಸವಿತಾ ವಾಸು, ಪ್ರೇಮ ಸಿಂಗ್, ಮಧುರಾ ಶಿವಾನಂದ್, ಶ್ರೀನಿವಾಸ್ ಮೇಸಿ, ಯಲ್ಲಮ್ಮ ದೇವಿ ಪ್ರತಿಷ್ಠಾನದ ಎಸ್.ಬಿ.ರಘುನಾಥ್, ಲೋಕೇಶಕುಮಾರ್, ಉಮೇಶ್ ಹಿರೇನೆಲ್ಲೂರು, ಶಶಿಧರಮೂರ್ತಿ, ಚಂದ್ರಕಾಂತ ಜಿಂಗಾಡೆ, ಷಣ್ಮುಖ ಇತರರಿದ್ದರು.