ಸೊರಬದಲ್ಲಿ ವಿವಿಧ ಸಂಸ್ಥೆಗಳಿಂದ ಗಾಯಕಿ ಎಸ್.ಜಾನಕಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ. ಎಚ್.ಇ.ಜ್ಞಾನೇಶ್, ಸಂದೀಪ್, ಗುರುಮೂರ್ತಿ, ಪೂರ್ಣಿಮಾ ಬಾವೆ, ಗುರುಮೂರ್ತಿ, ಲಕ್ಷ್ಮೀ ಇತರರಿದ್ದರು.
ಸೊರಬ: ದಕ್ಷಿಣ ಭಾರತದ ಗಾನಕೋಗಿಲೆ ಎಂದು ಪ್ರಸಿದ್ಧಿಯಾಗಿದ್ದ ಎಸ್.ಜಾನಕಿ ಅವರ ನಿಧನ ಕನ್ನಡ ಚಿತ್ರರಂಗ, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಸಭಾಂಗಣದಲ್ಲಿ ಸುಗಮ ಸಂಗೀತ ಪರಿಷತ್, ಸುಗಮ ಸಂಗೀತ ಕಲಾ ಬಳಗ, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಯನ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 23 ಭಾಷೆಗಳಲ್ಲಿ 48 ಸಾವಿರ ಹಾಡುಗಳನ್ನು ಹಾಡಿರುವುದು ಸಂಗೀತ ಕ್ಷೇತ್ರದ ಅತ್ಯುನ್ನತ ಸಾಧನೆಗಳಲ್ಲಿ ಒಂದು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ ಮಾತನಾಡಿ, ಎಸ್.ಜಾನಕಿ ಅವರ ಸಾಧನೆ ಅನನ್ಯ. ಅವರ ಹಾಡುಗಳು ಯುವ ಗಾಯಕರಿಗೆ ಸ್ಫೂರ್ತಿ ನೀಡುವಂತಿವೆ ಎಂದು ಹೇಳಿದರು.
ಗಾಯಕಿಯರಾದ ಪೂರ್ಣಿಮಾ ಬಾವೆ ಮತ್ತು ಲಕ್ಷ್ಮೀ ಮುರಳೀಧರ ಅವರು ಎಸ್.ಜಾನಕಿ ಅವರ ಹಾಡುಗಳನ್ನು ಹಾಡಿದರು. ಶಾಲೆಯ ಮುಖ್ಯ ಶಿಕ್ಷಕ ಸಂದೀಪ್, ತಾಲೂಕು ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಗುರುಮೂರ್ತಿ, ಸುಮಾ, ವಸಂತ್ ಬಾಂಬೋರೆ, ಲಕ್ಷ್ಮಣ್, ರಾಜು ಹಿರಿಯಾವಲಿ, ಮಹೇಶ್ ಖಾರ್ವಿ, ಈರಪ್ಪ, ಕಾವ್ಯಾ, ಭಾರತಿ ಭಂಡಾರಿ, ಮೋಹನ್ ಇತರರಿದ್ದರು.