- ಕುರುಹು ಸಿಗದಂತೆ ಸಿಸಿಟಿವಿ ಡಿವಿಆರ್, ವೈಫೈ ಕ್ಯಾಮೆರಾ ಬಿಚ್ಚಿಕೊಂಡು ಹೋದ ಕಳ್ಳರು
- ಇಂಜಿನಿಯರ್ ರವಿಕುಮಾರ್ ಎಂಬುವರ ಮನೆ ಬೀಗ ಮುರಿದು ಒಳ ನುಗ್ಗಿದ ಕಳ್ಳತನ
- ಶಿವಮೊಗ್ಗ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ನಗರದ ಚೆನ್ನಪ್ಪ ಲೇಔಟ್(Chennappa Layout)ನಲ್ಲಿ ಮನೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿ ವಿಗ್ರಹಗಳು ಹಾಗೂ ಸಿಸಿಟಿವಿ ಉಪಕರಣಗಳನ್ನು ಕಳವು(Theft) ಮಾಡಿದ್ದಾರೆ.
ಇಂಜಿನಿಯರ್(Engineer)ಎಚ್.ಆರ್.ರವಿಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ರವಿಕುಮಾರ್ ಅವರು ಪತ್ನಿಯೊಂದಿಗೆ ಬೆಂಗಳೂರಿಗೆ ಹೋಗಿದ್ದರು. ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಬಾಗಿಲನ್ನು ಆಯುಧದಿಂದ ಮೀಟಿ ಒಳನುಗ್ಗಿದ್ದಾರೆ. ಬೀರುವಿನ ಬೀಗ ಮುರಿದು ಒಳಗಿದ್ದ ವಸ್ತುಗಳನ್ನು ದೋಚಿದ್ದಾರೆ. 250 ಗ್ರಾಂನ ಬೆಳ್ಳಿಯ ಗಣಪತಿ, ಗೌರಿ, ಲಕ್ಷ್ಮೀ ವಿಗ್ರಹಗಳು ಹಾಗೂ ಪಂಚಪಾತ್ರೆ ಕಳುವಾಗಿವೆ. ಕಳ್ಳರು ಕುರುಹು ಸಿಗದಂತೆ ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್(CCTV DVR) ಹಾಗೂ ವೈಫೈ ಕ್ಯಾಮೆರಾವನ್ನೂ ಬಿಚ್ಚಿಕೊಂಡು ಹೋಗಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.