ರಿಪ್ಪನ್ಪೇಟೆ ಪಟ್ಟಣದ ಸಿದ್ಧಿವಿನಾಯಕ ಸ್ವಾಮಿ, ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.
- ಏ.13ರವರೆಗೆ ನಡೆಯಲಿದೆ ಜಾತ್ರೆ
- 12ರಂದು ಬೆಳಗ್ಗೆ ಪ್ರಭೋದೋತ್ಸವ ತೀರ್ಥಯಾತ್ರ ಅವಭೃತ,
- ಸಿದ್ಧಿ ವಿನಾಯಕ, ಅನ್ನಪೂರ್ಣೇಶ್ವರಿ ಜಾತ್ರೆಗೆ ಚಾಲನೆ
ರಿಪ್ಪನ್ಪೇಟೆ: ಪಟ್ಟಣದ ಸಿದ್ಧಿ ವಿನಾಯಕ ಹಾಗೂ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಜಾತ್ರೆಯ ಧಾರ್ಮಿಕ ಆಚರಣೆಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಏ.13ರವರೆಗೆ ಜಾತ್ರೆ ನಡೆಯಲಿದೆ. ಬೆಳಗ್ಗೆ ಲನ್ಯಾಸ ಪೂರ್ವಕ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಗ್ರಹಯಾಗ, ಕೌತುಕ ಬಂಧನ, ಅಂಕುರಾರ್ಪಣ, ಧ್ವಜಾರೋಹಣ, ಹೋಮ, ಬಲಿ ಪೂಜೆ ರಂಗಪೂಜೆ ನೇರವೇರಿಸಲಾಯಿತು. ಶನಿವಾರ 12.33ಕ್ಕೆ ಮಹಾ ರಥೋತ್ಸವಕ್ಕೆ ಚಾಲನೆ, ರಾತ್ರಿ 8ಕ್ಕೆ ರಥಾವರೋಹಣ, ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ, ಧರ್ಮಸಭೆ ನಡೆಯಲಿದೆ. 12ರಂದು ಬೆಳಗ್ಗೆ ಪ್ರಭೋದೋತ್ಸವ ತೀರ್ಥಯಾತ್ರ ಅವಭೃತ, ಕೌತುಕ ವಿಸರ್ಜನ, ಧ್ವಜಾವರೋಹಣ, ಮಹಾಪೂಜೆ, ಮಂತ್ರಾಕ್ಷತೆ, ಗಣಪತಿ, ಕುಂಭಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ.