ಜಿಲ್ಲಾಡಳಿತ ಹಾಗೂ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದಿಂದ ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತಿಯನ್ನು ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಜಿ.ಪಲ್ಲವಿ, ಕೆ.ಚೇತನ್, ಎಸ್.ರವಿಕುಮಾರ್, ಸಿ.ಎಸ್.ಚಂದ್ರಭೂಪಾಲ ಇದ್ದರು. 
ಶಿವಮೊಗ್ಗ

ಶ್ರೀ ಸಿದ್ದರಾಮೇಶ್ವರರು ನೀರಾವರಿಯ ಹರಿಕಾರ I siddaraeshwara jayanti

ಪ್ರಮುಖ ಮುಖ್ಯಾಂಶಗಳು

  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣನೆ
  • ಜಿಲ್ಲೆಯ ವಿವಿಧೆಡೆ ಕಾಯಕ ಯೋಗಿಯ ಜಯಂತಿ
  • ಸಿದ್ದರಾಮರ ಕಾಯಕ ನಿಷ್ಠೆ ಶ್ಲಾಘಿಸಿದ ಜನರು
ಶಿವಮೊಗ್ಗ: ಕಾಯಕ (work) ವೇ ಎಲ್ಲದಕ್ಕಿಂತ ಶ್ರೇಷ್ಠ. ಮಾನವೀಯತೆಯನ್ನು ಬೋಧಿಸುವುದೇ ನಿಜವಾದ ಧರ್ಮ (religion)ಎಂದು ನಂಬಿ ಅದನ್ನೇ ಪ್ರತಿಪಾತಿಸುತ್ತಿದ್ದ ಕಾಯಕಯೋಗಿ ಸಿದ್ದರಾಮೇಶ್ವರರು ನಮ್ಮೆಲ್ಲರಿಗೂ ಆದರ್ಶ ಪುರುಷ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದಿಂದ ಬುಧವಾರ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲೇ ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ನೀರಾವರಿ ಕ್ರಾಂತಿಗೆ ನಾಂದಿ ಹಾಡಿದವರು. ಕುಡಿಯುವ ನೀರಿನ ಯೋಜನೆಗಳಿಗೆ ಸಿದ್ದರಾಮೇಶ್ವರರು ಪ್ರೇರಕ ಶಕ್ತಿ. ನೇರ ಮತ್ತು ನಿಷ್ಠುರ ನುಡಿಯ ದಾರ್ಶನಿಕರಾಗಿದ್ದರು ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ದೇಶಾದ್ರಿ ಹೊಸ್ಮನೆ, ಮಹಾನ್ ಪುರುಷರ, ದಾರ್ಶನಿಕರ ಜಯಂತಿ ಆತ್ಮಾವಲೋಕನಕ್ಕೆ ವೇದಿಕೆಯಾಗಿದೆ. ಅವರ ಜೀವನ ಚರಿತ್ರೆ, ಮೌಲ್ಯಗಳು, ತತ್ವಗಳನ್ನು ಅರಿತು ಅವುಗಳನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯುವ ಪ್ರಯತ್ನಗಳಾಗಬೇಕೇ ವಿನಃ ಕೇವಲ ಸಭೆ ಸಭಾರಂಭಗಳಿಗೆ ಸೀಮಿತವಾಗಬಾರದು. ದೊಡ್ಡ ಕಟ್ಟಡಗಳು, ಅರಮನೆ, ಅಣೆಕಟ್ಟು ಕಟ್ಟುವ ಸಂಸ್ಕೃತಿಯ ಪ್ರತೀಕವಾದ ನಮ್ಮ ಸಮಾಜ ಕೀಳರಿಮೆ ಬಿಟ್ಟು ಉನ್ನತ ಸ್ಥಾನದಲ್ಲಿದ್ದೇವೆ ಎಂಬುದನ್ನು ಹೆಮ್ಮೆ ಪಡಬೇಕು. ಸಮಾಜಕ್ಕಾಗಿ ಕೊಡುಗೆಗಳನ್ನು ನೀಡಬೇಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ವರ್ಗ, ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಜವಳಿ ನಿಗಮದ ಅಧ್ಯಕ್ಷ ಕೆ.ಚೇತನ್ ಮಾತನಾಡಿದರು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ರವಿಕುಮಾರ್, ಶಿವಮೊಗ್ಗ ತಾಲೂಕು ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಟಿ.ಜಗದೀಶ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಎಎಸ್ಪಿ ರಮೇಶ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.
"

ಮೂಢನಂಬಿಕೆ, ಅಸಮಾನತೆ, ತಾರತಮ್ಯ ತಿರಸ್ಕರಿಸಿದ್ದ ಅವರು ಮನುಷ್ಯತ್ವವೇ ಮುಖ್ಯವೆಂದು ಮನುಕುಲದ ಏಳಿಗೆಗಾಗಿ ದುಡಿದರು. ಇಂತಹ ಮಹಾನ್ ಪುರುಷರ ಮೌಲ್ಯಗಳು, ತತ್ವಗಳು ಯುವ ಪೀಳಿಗೆಗೆ ಎಂದಿಗೂ ಮಾದರಿಯಾಗಿವೆ. ಸಿದ್ದರಾಮೇಶ್ವರರಂತೆ ಅವರ ಸಮಾಜ ಕೂಡ ಶ್ರೇಷ್ಠವಾಗಿದೆ.