ಶಿವಮೊಗ್ಗ ತುಂಗಾನಗರ ಠಾಣೆ 
ಶಿವಮೊಗ್ಗ

ಉದ್ಯಮಿ ಮನೆಯಲ್ಲಿ 1.34 ಲಕ್ಷ ರೂ. ಮೌಲ್ಯದ ಬ್ರಾಂಡೆಡ್ ಶೂ ಕಳ್ಳತನ

ಪ್ರಮುಖ ಮುಖ್ಯಾಂಶಗಳು

  • ಎರಡು ಮನೆಗಳಲ್ಲಿದ್ದ ಬ್ರಾಂಡೆಡ್ ಶೂ, ಚಪ್ಪಲಿಗಳು
  • ಶಿವಮೊಗ್ಗ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ನಗರದ ಅಲ್ ಹರೀಮ್ ಲೇಔಟ್‌ನ ಪ್ರತ್ಯೇಕ ಎರಡು ಮನೆಗಳಲ್ಲಿದ್ದ ಬರೋಬ್ಬರಿ 1.34 ಲಕ್ಷ ರೂ. ಮೌಲ್ಯದ ಶೂ ಮತ್ತು ಚಪ್ಪಲಿಗಳನ್ನು ಕಳ್ಳತನ ಮಾಡಲಾಗಿದೆ.
30 ವರ್ಷದ ಉದ್ಯಮಿ, ಗುತ್ತಿಗೆದಾರನ ಮನೆಯಲ್ಲಿ 1.29 ಲಕ್ಷ ರೂ. ಮೌಲ್ಯದ 25 ಜತೆ ಶೂ ಮತ್ತು ಚಪ್ಪಲಿ ಹಾಗೂ ತಳಮಹಡಿಯಲ್ಲಿದ್ದ ಮನೆಯಲ್ಲಿ 5 ಸಾವಿರ ರೂ. ಮೌಲ್ಯದ 10 ಜತೆ ಶೂ ಮತ್ತು ಚಪ್ಪಲಿಗಳನ್ನು ಕಳ್ಳತನ ಮಾಡಲಾಗಿದೆ.
ಮನೆ ನಿವಾಸಿಗಳು ಸ್ಲಿಪ್ಪರ್ ಸ್ಟ್ಯಾಂಡ್‌ನಲ್ಲಿ ವಿವಿಧ ಬ್ರಾೃಂಡ್‌ಗಳಿಗೆ ಸೇರಿದ 25 ಜತೆ ಶೂ ಮತ್ತು ಚಪ್ಪಲಿಗಳನ್ನು ಇರಿಸಿದ್ದರು. ನ.2ರ ತಡರಾತ್ರಿ ಮನೆ ಹೊರಗಡೆ ಇದ್ದ ಬೆಲೆಬಾಳುವ ಶೂ ಮತ್ತು ಚಪ್ಪಲಿಗಳು ಹಾಗೂ ಟೆರೆಸ್‌ನಲ್ಲಿ ಒಣಗಲು ಹಾಕಿದ್ದ ಎರಡು ಜತೆ ಬಟ್ಟೆಗಳನ್ನೂ ಕಳವು ಮಾಡಲಾಗಿದೆ.
ಇದೇ ಮನೆಯ ನೆಲಮಹಡಿಯಲ್ಲಿ ಹೊರಗಡೆ ಇದ್ದ 5 ಸಾವಿರ ರೂ. ಮೌಲ್ಯದ ಬೆಲೆಬಾಳುವ 10 ಜತೆ ಚಪ್ಪಲಿ ಮತ್ತು ಶೂಗಳ ಕಳ್ಳತನವಾಗಿವೆ. ಒಂದೇ ದಿನ ಪ್ರತ್ಯೇಕ ಪ್ರಕರಣದಲ್ಲಿ 1.34 ಲಕ್ಷ ರೂ. ಮೌಲ್ಯದ ಚಪ್ಪಲಿ ಹಾಗೂ ಶೂಗಳು ಕಳ್ಳತನವಾಗಿವೆ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.