ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಂ.ಬಿ.ಶಿವಕುಮಾರ್, ಡಾ. ಜಿ.ಎಸ್.ಶಿವಕುಮಾರ್, ಕುಬೇರಪ್ಪ ಮತ್ತಿತರರು ಪಾಲ್ಗೊಂಡಿದ್ದರು. 
ಶಿವಮೊಗ್ಗ

ಎಲ್ಲ ಕ್ಷೇತ್ರಗಳಲ್ಲೂ ಶಿವಮೊಗ್ಗ ಅಭಿವೃದ್ಧಿ

ಸೋಮಶೇಖರ ಎನ್
ಶಿಕಾರಿಪುರ: ಸ್ವಾತಂತ್ರೃ ಸೇನಾನಿಗಳ ಬಲಿದಾನ ಮತ್ತು ಹೋರಾಟ ಸ್ಮರಿಸುವ ಶ್ರೇಷ್ಠ ದಿನ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಅಂಗಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಗತ್‌ಸಿಂಗ್, ಸುಭಾಷ್‌ಚಂದ್ರ ಬೋಸ್, ಮಹಾತ್ಮಾ ಗಾಂಧಿ ಹಾಗೂ ಬಾಲಗಂಗಾಧರ್ ತಿಲಕ್ ಸೇರಿದಂತೆ ಮಹಾನ್ ನಾಯಕರು ದೇಶಕ್ಕಾಗಿ ಜೀವನ ಮುಡಿಪಿಟ್ಟರು ಎಂದು ತಿಳಿಸಿದರು.
10 ವರ್ಷಗಳಲ್ಲಿ ಶಿವಮೊಗ್ಗ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ. ರೈಲ್ವೆ, ವಿಮಾನ, ನೀರಾವರಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿದೆ. ಯುವಜನತೆ ಸದೃಢ ದೇಶ ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದರು.
ಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ  ಡಾ. ಜಿ.ಎಸ್.ಶಿವಕುಮಾರ್, ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ, ಅಂಗಸಂಸ್ಥೆಗಳ ಮುಖ್ಯಸ್ಥ ಡಾ. ವೀರೇಂದ್ರ, ವಿಶ್ವನಾಥ, ರವೀಂದ್ರ, ಎಚ್.ಡಿ.ಪ್ರಶಾಂತ್, ಪ್ರಶಾಂತ್ ಕುಬಸದ ಇತರರಿದ್ದರು.