ಭದ್ರಾವತಿಯ ಉಂಬ್ಳೇಬೈಲು ರಸ್ತೆಯ ಹಾಸ್ಟೆಲ್​ನಲ್ಲಿ ಆಯೋಜಿಸಿದ್ದ ಮುಂಗಾರು ಕಾವ್ಯಧಾರೆ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್​ ಉದ್ಘಾಟಿಸಿದರು. ಎಂ.ಎಸ್​.ಸುಧಾಮಣಿ , ಹೊಸಹಳ್ಳಿ ದಾಳೇಗೌಡ ಇತರರಿದ್ದರು. 
ಶಿವಮೊಗ್ಗ

ಸಾಹಿತ್ಯದ ಅಭಿರುಚಿ ಬೆಳೆಯಲಿ

ಭದ್ರಾವತಿ: ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಕಥೆ, ಕವಿತೆ ಬರೆಯುವ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್​ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆಯಿಂದ ಉಂಬ್ಳೇಬೈಲು ರಸ್ತೆಯಲ್ಲಿರುವ ಮೆಟ್ರಿಕ್​ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಮುಂಗಾರು ಕಾವ್ಯಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್​ ಗೀಳಿಗೆ ಒಳಗಾಗಿದ್ದಾರೆ. ಸಾಹಿತ್ಯ ರಚಿಸುವ, ತಮ್ಮೊಳಗಿರುವ ಅಭಿರುಚಿ ವ್ಯಕ್ತಪಡಿಸುವ ಪ್ರಯತ್ನ ಮಾಡುವುದೇ ಇಲ್ಲ. ನಮ್ಮ ಕನ್ನಡ ನಾಡಿನ ಭಾಷೆ, ಸಂಸತಿ ಉಳಿಯಬೇಕಾದಲ್ಲಿ ಯುವ ಕವಿಗಳು ಬರಹಗಾರರು ರೂಪುಗೊಳ್ಳಬೇಕು. ಕಸಾಪ ವೇದಿಕೆ ಎಲ್ಲ ಶಾಲಾ ಕಾಲೇಜುಗಳಲ್ಲಿ ಕಾವ್ಯ ಕಮ್ಮಟದಂತಹ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಎಲ್ಲ ತಾಲೂಕು ಟಕಗಳಿಂದಲೂ ಆಗುತ್ತಿದೆ ಎಂದರು.
ವೇದಿಕೆ ತಾಲೂಕು ಅಧ್ಯೆ ಎಂ.ಎಸ್​.ಸುಧಾಮಣಿ ಮಾತನಾಡಿ, ಕನ್ನಡ ಭಾಷೆ ಬೆಳೆಸುವ ಹಾಗೂ ಅಭಿರುಚಿಯನ್ನು ಮಕ್ಕಳಲ್ಲಿ ಶಾಶ್ವತವಾಗಿ ನೆಲೆಗೊಳಿಸುವ ನಿಟ್ಟಿನಲ್ಲಿ ಕಥೆ, ಕಾವ್ಯ ಕಮ್ಮಟದ ಕಾರ್ಯಕ್ರಮ ಶಾಲಾ ಕಾಲೇಜುಗಳಲ್ಲಿ ನಡೆಸುತ್ತಿದ್ದೇವೆ. ಇದರಿಂದ ಯುವ ಬರಹಗಾರರರು ಹುಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಸಾಹಿತಿ ಹೊಸಹಳ್ಳಿ ದಾಳೇಗೌಡ, ಪ್ರಮುಖರಾದ ಎಂ.ಆರ್​.ರೇವಣಪ್ಪ, ಕೆ.ನಾಗರಾಜ್​, ರಮ್ಯಾ, ಡಾ. ವಿಜಯದೇವಿ, ಕೋಗಲೂರು ತಿಪ್ಪೇಸ್ವಾಮಿ, ಕೋಡ್ಲು ಯಯ್ಯ, ಲೋಹಿತ್​, ಗಂಗರಾಜ್​ ಮತ್ತಿತರರಿದ್ದರು.