ಸೊರಬ ತಾಲೂಕು ದೇವಾಂಗ ಸಮಾಜಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎಸ್.ಬಿ.ನಾಗರಾಜಪ್ಪ, ಟಿ.ಟಿ.ವೆಂಕಟೇಶ್, ಶಿವಯೋಗಿ ಇತರರಿದ್ದರು. 
ಶಿವಮೊಗ್ಗ

ಭಿನ್ನಮತ ಬದಿಗೊತ್ತಿ ಸಮಾಜ ಸಂಘಟಿಸಿ | Selection of Office Bearers

ಶಿವಕುಮಾರ ಎಸ್.ಪಿ.
ಸೊರಬ: ದೇವಾಂಗ ಸಮಾಜ ಶೈಕ್ಷಣಿಕ, ಸಂಘಟನಾತ್ಮಕವಾಗಿ ಮತ್ತಷ್ಟು ಸದೃಢರಾಗಬೇಕಿದೆ. ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಾಗಿರಬೇಕು ಎಂದು ಸಮಾಜದ ಜಿಲ್ಲಾಧ್ಯಕ್ಷ ಟಿ.ರಾಜೇಶ್ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ದೇವಾಂಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಮುದಾಯದ ಸಂಘಟನೆಯು ರಾಜ್ಯದಲ್ಲಿಯೇ ವಿಶೇಷ ಮೆಚ್ಚುಗೆ ಪಡೆದಿದೆ. ಹಿರಿಯರ ಮಾರ್ಗದರ್ಶನದಡಿ ಸಮಾಜ ಸಂಘಟಿಸುವ ಕೆಲಸ ಮಾಡಬೇಕಿದೆ. ತಾಲೂಕಿನಲ್ಲಿ 183 ದೇವಾಂಗ ಮತ್ತು 356 ನೇಕಾರ ಕುಟುಂಬಗಳಿವೆ. ದೇವರ ದಾಸಿಮಯ್ಯ ಜಯಂತಿಯನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವಂತೆ ತಿಳಿಸಿದರು. 
ನೂತನ ಪದಾಧಿಕಾರಿಗಳು: ಇ.ಎಚ್.ಶಶಿಧರ (ಅಧ್ಯಕ್ಷ), ನೇಮರಾಜ್ (ಉಪಾಧ್ಯಕ್ಷ), ಎಂ.ಎಸ್.ಸತೀಶ್ (ಕಾರ್ಯದರ್ಶಿ), ರವಿ ಕೆ. (ಖಜಾಂಚಿ), ಕೆ.ವಿ.ಕುಮಾರ್, ಎಲ್.ವೆಂಕಟೇಶ್ (ಸಂಘಟನಾ ಕಾರ್ಯದರ್ಶಿಗಳು), ಕೆ.ಸತೀಶ್ (ಸಹ ಕಾರ್ಯದರ್ಶಿ), ಪಿ.ಸುರೇಶ್, ಎ.ರಂಗನಾಥ್, ಕೆ.ವಿ.ಪ್ರಕಾಶ್, ಹೇಮಾವತಿ, ಸಿ.ಕೆ.ರಾಜಪ್ಪ, ಎಂ.ಆರ್.ಲಿಂಗರಾಜ್, ಕೆ.ರವಿ, ಪಿ.ಸುರೇಶ್, ಗೋಪಿನಾಥ್ (ನಿರ್ದೇಶಕರು) ಆಯ್ಕೆಯಾದರು.
ದೇವಾಂಗ ಸಮಾಜದ ತಾಲೂಕು ಗೌರವಾಧ್ಯಕ್ಷ ಎಸ್.ಬಿ.ನಾಗರಾಜಪ್ಪ, ರಾಜ್ಯ ಸಮಿತಿಯ ಟಿ.ಟಿ.ವೆಂಕಟೇಶ್, ಶಿವಯೋಗಿ, ನಿಕಟಪೂರ್ವ ಅಧ್ಯಕ್ಷ ಡಿ.ಪರಸಪ್ಪ, ಎಂ.ಎಚ್.ಶ್ರೇಯ , ಎನ್.ಬಸವಂತಪ್ಪ ಇತರರಿದ್ದರು.