ಹೊಳೆಹೊನ್ನೂರ ಲಯನ್ಸ್ ವಿದ್ಯಾ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಬಿ.ಎಸ್.ನಾಗರಾಜ್ ಉದ್ಘಾಟಿಸಿದರು. ಎಚ್.ಸಿ.ರಾಜೇಶ್, ಕೆ.ಅರ್.ಪ್ರವೀಣ್, ಡಾ.ಯು.ವಿಜಯಶೆಟ್ಟಿ, ಇ.ರೇಣುಕಾ ಇತರರಿದ್ದರು. 
ಶಿವಮೊಗ್ಗ

ಸೇವೆ ಸಮಾಜದ ಅಭಿವೃದ್ಧಿಗೆ ಪೂರಕ

ಹೊಳೆಹೊನ್ನೂರು: ಲಯನ್ಸ್ ಕ್ಲಬ್ ಸೇವೆ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುವುದು ಮುಖ್ಯ ಉದ್ದೇಶ ಎಂದು ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷ ಬಿ.ಎಸ್.ನಾಗರಾಜ್ ಹೇಳಿದರು. 
ಪಟ್ಟಣದ ಲಯನ್ಸ್ ವಿದ್ಯಾ ಸಂಸ್ಥೆ ಆವರಣದಲ್ಲಿ ಬುಧವಾರ ನಡೆದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿ ಆರೋಗ್ಯ ಜಾಗೃತಿ, ಉಚಿತ ಕಣ್ಣಿನ ಚಿಕಿತ್ಸೆ, ರಕ್ತದಾನ, ಮಧುಮೇಹ ತಪಾಸಣೆ ಶಿಬಿರ, ಪರಿಸರ ಸಂರಕ್ಷಣೆ, ಗಿಡ ನೆಡುವುದು, ಪ್ಲಾಸ್ಟಿಕ್ ನಿಷೇಧ ಜಾಗೃತಿ ಮತ್ತು ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುವುದು. ಅರ್ಹ ಜನರಿಗೆ ತುರ್ತು ಸಹಾಯ ಒದಗಿಸಲಾಗುತ್ತದೆ ಎಂದರು.
ಕೋ-ಆರ್ಡಿನೇಟರ್ ಹೆಬ್ಬಂಡಿ ನಾಗರಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ಅಧ್ಯಕ್ಷ ಬಿ.ಎಸ್.ನಾಗರಾಜ್, ಎಚ್.ಸಿ.ರಾಜೇಶ್, ಕೆ.ಅರ್.ಪ್ರವೀಣ್, ಡಾ.ಯು.ವಿಜಯಶೆಟ್ಟಿ, ಇ.ರೇಣುಕಾ, ಎನ್.ರಮೇಶ್, ಪ್ರೊ.ಎಸ್.ಶೇಖರಪ್ಪ, ಎ.ಜಿ.ವಿಜಯಕುಮಾರ್, ಕೆ.ಎಚ್.ಮಲ್ಲೇಶಪ್ಪ  ಇತರರಿದ್ದರು.