ಸಾಗರದ ಸಂಜಯ ವಿದ್ಯಾಕೇಂದ್ರದಲ್ಲಿ ವಿಶ್ವೇಶ್ವರಯ್ಯ ಪುತ್ಥಳಿಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅನಾವರಣಗೊಳಿಸಿದರು. ಡಾ. ರಾಜನಂದಿನಿ ಕಾಗೋಡು, ಅನುರಾಧಾ ಕಾಗೋಡು ಇತರರಿದ್ದರು. 
ಶಿವಮೊಗ್ಗ

ಹಿರಿಯ ವಿದ್ಯಾರ್ಥಿಗಳ ಕಾರ್ಯ ಮಾದರಿ

ಸೋಮಶೇಖರ ಎನ್
ಸಾಗರ: ತಾವು ಕಲಿತ ಶಿಕ್ಷಣ ಸಂಸ್ಥೆಗೆ ನೆರವಾಗುವುದು ಇತರರಿಗೂ ಪ್ರೇರಣೆ ಎಂದು ಸಂಜಯ ವಿದ್ಯಾಕೇಂದ್ರದ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.
ಸಂಜಯ ವಿದ್ಯಾಕೇಂದ್ರದಲ್ಲಿ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಕೊಡುಗೆಯಾಗಿ ನೀಡಿದ ವಿಶ್ವೇಶ್ವರಯ್ಯ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಗೋಡು ತಿಮ್ಮಪ್ಪ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಯುವಜನರಿಗೆ ತಾಂತ್ರಿಕ ಶಿಕ್ಷಣ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಪಾಲಿಟೆಕ್ನಿಕ್ ಕಾಲೇಜು ಆರಂಭವಾಗಿತ್ತು. ಇದೀಗ ಸಾವಿರಾರು ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಕಲಿತು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ ಎಂದರು.
ವಿಶ್ವೇಶ್ವರಯ್ಯ ಪುತ್ಥಳಿಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅನಾವರಣಗೊಳಿಸಿದರು. ಸಂಸ್ಥೆ ಕಾರ್ಯದರ್ಶಿ ಅನುರಾಧಾ ಕಾಗೋಡು ಅವರು ಹಳೆಯ ವಿದ್ಯಾರ್ಥಿಗಳು ಮುದ್ರಿಸಿ ಹೊರತಂದ ದಿನದರ್ಶಿಕೆ ಬಿಡುಗಡೆ ಮಾಡಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್.ಪಿ.ದೇವರಾಜ, ಡಾ. ವೈ.ವಿಜಯಕುಮಾರ್, ಸಿ.ಎ.ವಿದ್ಯಾಧರ, ಕೆ.ಪ್ರಭಾಕರ, ಅಮಿನ್, ವಿನಯ ದೇವರಾಜ್, ಬಾಬುರಾವ್, ವಿಜಯಕುಮಾರ್ ಇತರರಿದ್ದರು.