ತ್ಯಾಗರ್ತಿ ಸಮೀಪದ ಕೋಟೆಕೊಪ್ಪ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಸುಜಾತಾ, ಪ್ರಭಾವತಿ, ಧರ್ಮರಾಜ, ಅಶ್ವಿನಿ, ಗಣಪತಿ ಮಂಡಗಳಲೆ ಇತರರಿದ್ದರು. 
ಶಿವಮೊಗ್ಗ

ಕಡಿಮೆ ಮಕ್ಕಳಿರುವ ಶಾಲೆ ಕೆಪಿಎಸ್‌ನಲ್ಲಿ ವಿಲೀನ

ಪ್ರಮುಖ ಮುಖ್ಯಾಂಶಗಳು

  • ತ್ಯಾಗರ್ತಿ, ಬ್ಯಾಕೋಡು, ಸಾಗರ ನಗರ ಸೇರಿ ಮೂರು ಕೆಪಿಎಸ್‌ಗಳು ಮಂಜೂರು
  • ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದ ಮಕ್ಕಳ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ
ತ್ಯಾಗರ್ತಿ: ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ಕಡಿಮೆ ಮಕ್ಕಳು ಇರುವ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಲೀನಗೊಳಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಮೀಪದ ಕೋಟೆಕೊಪ್ಪ ಶಾಲೆಯಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ತ್ಯಾಗರ್ತಿ, ಬ್ಯಾಕೋಡು, ಸಾಗರ ನಗರ ಸೇರಿ ಮೂರು ಕೆಪಿಎಸ್‌ಗಳು ಮಂಜೂರಾಗಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗಿರುವ ಹಾಗೂ ಹಳೆಯ ಕಟ್ಟಡ, ಶಿಕ್ಷಕರ ಕೊರತೆಯಿಂದ ಗ್ರಾಮೀಣ ಭಾಗದ ಶಾಲೆ ಕುಂದು ಕೊರತೆಗಳನ್ನು ನೀಗಿಸಲು ಕೆಪಿಎಸ್ ಎಲ್ಲರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದ ಮಕ್ಕಳ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ದೊರೆಯುತ್ತದೆ. ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಪಾಲಕರು ಶಿಕ್ಷಣದ ಮಹತ್ವ ಅರಿತು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ತ್ಯಾಗರ್ತಿ ಕ್ಲಸ್ಟರ್‌ನ 15 ಶಾಲೆ ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಹಿರೇಬಿಲಗುಂಜೆ ಗ್ರಾಪಂ ಅಧ್ಯಕ್ಷೆ ಸುಜಾತಾ, ತ್ಯಾಗರ್ತಿ ಗ್ರಾಪಂ ಅಧ್ಯಕ್ಷೆ ಪ್ರಭಾವತಿ, ವೀಣಾ ಜಗದೀಶ್, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ, ಧರ್ಮರಾಜ, ಗಣಪತಿ ಮಂಡಗಳಲೆ, ಟಿ.ಕೆ.ಹನುಮಂತಪ್ಪ, ಮುಖ್ಯ ಶಿಕ್ಷಕಿ ಅಶ್ವಿನಿ, ನೇತ್ರಾವತಿ, ಬಸವರಾಜ, ನಾಗರಾಜ್, ಲಕ್ಷ್ಮಣ್ ಇತರರಿದ್ದರು.