ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್ ಎಸ್ಸಿ-ಎಸ್ಟಿ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಐ ಶಾಂತಲಾ, ಆರ್.ಸಂದೀಪ್, ಕೆ.ರಂಗನಾಥ, ಶಶಿಕುಮಾರ್ ಇತರರಿದ್ದರು.
ಹೊಳೆಹೊನ್ನೂರು: ಸ್ವಾತಂತ್ರ್ಯಪೂರ್ವದಲ್ಲಿ ಅವಮಾನ ಸಹಿಸಿಕೊಂಡು, ಹೆಣ್ಣು ಮಕ್ಕಳಿಗೆ ಕಷ್ಟಪಟ್ಟು ಅಕ್ಷರ ಕಲಿಸಿದ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಹೊಳೆಹೊನ್ನೂರು ಠಾಣೆ ಎಸ್‌ಐ ಶಾಂತಲಾ ಹೇಳಿದರು.
ಸಮೀಪದ ಕಲ್ಲಿಹಾಳ್‌ನ ಎಸ್ಸಿ-ಎಸ್ಟಿ ವಿದ್ಯಾರ್ಥಿ ನಿಲಯದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ನಡೆದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ವಂಚಿತರಾಗಿದ್ದ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಿದ ಏಕೈಕ ಮಹಿಳೆ. ಅಂತಹ ಮಹಾನ್ ಶಿಕ್ಷಕಿಯ ಜೀವನ ನಮಗೆಲ್ಲರಿಗೂ ಮಾದರಿ ಎಂದರು. ಶಿವಮೊಗ್ಗ ಜಿಲ್ಲಾ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಸದಸ್ಯ ಆರ್.ಸಂದೀಪ್, ಮಾನವ ಬಂದುತ್ವ ವೇದಿಕೆ ಭದ್ರಾವತಿ ತಾಲೂಕು ಸಂಚಾಲಕ ಕೆ.ರಂಗನಾಥ, ವಾರ್ಡನ್ ಶಶಿಕುಮಾರ್, ಟಿ.ಎಚ್.ರಾಮಚಂದ್ರ, ರಫೀಕ್ ಅಹಮದ್, ಯಾಸಿನ್, ಬಸವರಾಜ್, ನಾಗರಾಜ್, ಕೊಟ್ರೇಶ್ ಇತರರಿದ್ದರು.