ಮಂಗೋಟೆ ಗ್ರಾಮದ ಹಳೆಯ ಶಾಲಾ ಕಟ್ಟಡವನ್ನು ಉಳಿಸಿಕೊಡುವಂತೆ ಆಗ್ರಹಿಸಿ ಗ್ರಾಮದ ಗಜೇಂದ್ರ, ಜಗದೀಶ್, ಗುರುಶಾಂತಪ್ಪ, ಚನ್ನಬಸಪ್ಪ, ಮಲ್ಲೇಶಪ್ಪ, ರಾಜಪ್ಪ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ಶಿವಮೊಗ್ಗ

ಹಳೆಯ ಶಾಲೆಯ ಕಟ್ಟಡ ಉಳಿಸಿಕೊಡಿ I school old building

ಪ್ರಮುಖ ಮುಖ್ಯಾಂಶಗಳು

  • ಮಂಗೋಟೆ ಗ್ರಾಮಸ್ಥರ ಆಗ್ರಹ
  • ಡಿಸಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (school) ಯ ಕಟ್ಟಡ (building) ಮತ್ತು ಜಾಗವನ್ನು ಉಳಿಸಿಕೊಡುವಂತೆ ಆಗ್ರಹಿಸಿ ಭದ್ರಾವತಿ ತಾಲೂಕಿನ ಮಂಗೋಟೆ (mangote) ಗ್ರಾಮಸ್ಥರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಂಗೋಟೆ ಗ್ರಾಮದ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಪಟೇಲ್ ಹೋಬಳಿ ಸರ್ವೇ ನಂ.97ರಲ್ಲಿದ್ದು, ಈ ಶಾಲೆಯು 1959-60ನೇ ಸಾಲಿನಲ್ಲಿ ನಿರ್ಮಾಣವಾಗಿತ್ತು. ಆರಂಭದಲ್ಲಿ ನಾಲ್ಕು ಕೊಠಡಿಗಳಿದ್ದು, ನಂತರ 8 ಕೊಠಡಿಗಳ ನಿರ್ಮಾಣವಾಗಿತ್ತು. 2014ರಲ್ಲಿ ಸರ್ವೇ ನಂ.1ರ ಸರ್ಕಾರಿ ಜಾಗದಲ್ಲಿ ನೂತನ ಕಟ್ಟಡದಲ್ಲಿ ಈ ಶಾಲೆಯು ನಡೆಯುತ್ತಿದೆ. ಹಳೆಯ ಶಾಲಾ ಟ್ಟಡವು ತೆರವಾಗಿತ್ತು. ಹಳೆಯ ಕಟ್ಟಡದ ಜಾಗವನ್ನು ಗ್ರಾಮದ ಹಿರಿಯರು ದಾನವಾಗಿ ನೀಡಿದ್ದರು. ದಾನ ನೀಡಿದವರಿಗೆ ಪರ್ಯಾಯ ಜಾಗವನ್ನು ನೀಡಲಾಗಿತ್ತು. ದಾನ ನೀಡಿದವರ ಮಕ್ಕಳು ಕೆಲ ವರ್ಷಗಳ ಹಿಂದೆ ಜಾಗದ ಬಗ್ಗೆ ತಕರಾರು ತೆಗೆದು ಕೋರ್ಟ್ ಮೆಟ್ಟಿಲೇರಿದ್ದರು. ಜೂ.6ರಂದು ಶಿಕ್ಷಣ ಇಲಾಖೆ ಗಮನಕ್ಕೆ ತಾರದೆ ಕೋರ್ಟ್ ಆದೇಶವಿದೆ ಎಂದು ಹಳೆಯ ಕಟ್ಟಡವನ್ನು ಕೆಡವಲು ಪ್ರಯತ್ನಿಸಿದ್ದಾರೆ ಎಂದು ದೂರಿದರು.
ಊರಿನವರ ಪ್ರತಿಭಟನೆಯ ನಂತರ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹಳೆಯ ಶಾಲಾ ಕಟ್ಟಡವನ್ನು ಏಕಪಕ್ಷೀಯವಾಗಿ ಮೂವರು ವ್ಯಕ್ತಿಗಳು ಕೆಡವಿದ್ದಾರೆ. ಕೋರ್ಟ್ ಆದೇಶದ ಪ್ರತಿ ನಕಲಿ ಎಂಬ ಸಂಶಯ ಊರಿನವರದು. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ, ಹಳೆಯ ಕಟ್ಟಡದ ಜಾಗವನ್ನು ಉಳಿಸಿಕೊಂಡು ಶಿಕ್ಷಣ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗಜೇಂದ್ರ, ಜಗದೀಶ್, ರಾಜಪ್ಪ, ಬಸವರಾಜಪ್ಪ, ಕುಮಾರ್, ಗುರುಶಾಂತಪ್ಪ, ಚನ್ನಬಸಪ್ಪ, ಶಂಕ್ರಪ್ಪ, ಮಲ್ಲೇಶಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.