ಡಾ. ಡಿ.ಪ್ರಭಾಕರ ಬೀರಯ್ಯ 
ಶಿವಮೊಗ್ಗ

ನಾಳೆಯಿಂದ ಸತ್ಯ ಸಾಯಿ ಬಾಬಾ ಜನ್ಮಶತಮಾನೋತ್ಸವ | birth centenary

ಭದ್ರಾವತಿ: ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್‌ನಿಂದ ಡಿ.6 ಮತ್ತು 7ರಂದು ಶಾಲಾ ಕ್ರೀಡಾಂಗಣದಲ್ಲಿ ಭಗವಾನ್ ಶೀ ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಾ. ಡಿ.ಪ್ರಭಾಕರ ಬೀರಯ್ಯ ತಿಳಿಸಿದರು. 
ಜನ್ಮಶತಮಾನೋತ್ಸವದ ಅಂಗವಾಗಿ 10 ಸಾವಿರ ಜನರಿಗೆ ನಾರಾಯಣ ಸೇವೆ(ಅನ್ನಸಂತರ್ಪಣೆ), 450 ಪೌರ ಕಾರ್ಮಿಕರಿಗೆ ವಸ ವಿತರಣೆ, 100 ಅಂಗವಿಕಲ ಮಕ್ಕಳಿಗೆ ಉಡುಗೊರೆ, ವಿದ್ಯಾಜ್ಯೋತಿ ಯೋಜನೆಯಡಿ 20 ಸರ್ಕಾರಿ ಶಾಲೆಗಳ ಮಕ್ಕಳಿಗೆ ವಸ ವಿತರಣೆ, ನಿರಾಶ್ರಿತರ ಕೇಂದ್ರ, ವೃದ್ಧಾಶ್ರಮ ಮತ್ತು ನಿರ್ಗತಿಕರಿಗೆ ಕಂಬಳಿ ವಿತರಣೆ, ಆಶಾ ಕಾರ್ಯಕರ್ತೆಯರು, ಪುರೋಹಿತರು, ಕ್ಷೌರಿಕರು ಹಾಗು ಚಮ್ಮಾರರಿಗೆ ದಿನಸಿ ವಿತರಣೆ, 200 ಸಾಯಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಸ್ವಾಮಿ ಅವರ ಪಾದುಕೆ ಹಾಗು ವಸ ವಿತರಣೆ, ಶಾಲಾ ಸಿಬ್ಬಂದಿಗೆ ಜನ್ಮಶತಮಾನೋತ್ಸವದ ಬೆಳ್ಳಿ ನಾಣ್ಯ ವಿತರಣೆ, ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
6ರಂದು ಸಂಜೆ 6ಕ್ಕೆ ಈಶ್ವರಮ್ಮ ಪ್ರೌಢಶಾಲೆ ಮತ್ತು ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶಾಸಕ ಬಿ.ಕೆ.ಸಂಗಮೇಶ್ವರ್, ದಂತ ವೈದ್ಯ ರವಿ ದಬೀರ್ ಭಾಗವಹಿಸುವರು. 7ರಂದು ಸಂಜೆ 6ಕ್ಕೆ ಶ್ರೀ ಸತ್ಯ ಸಾಯಿ ಜ್ಞಾನಪೀಠ ಸಿಬಿಎಸ್‌ಇ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ, ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಪಾಲ್ಗೊಳ್ಳಲಿದ್ದಾರೆ. ಉದ್ಯಮಿ ಎಸ್.ರುದ್ರೇಗೌಡ, ವಿದ್ವಾನ್ ಶೃಂಗೇರಿ ನಾಗರಾಜ್, ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕಿ ಪ್ರಿಯಾ ಪೈ ಅವರನ್ನು ಗೌರವಿಸಲಾಗುವುದು ಎಂದರು.
ಪ್ರಮುಖರಾದ ಕೆ.ಸೌಮ್ಯರೂಪಾ, ಜೆ.ಪಿ.ಪರಮೇಶ್ವರಪ್ಪ, ಶೀಲಮ್ಮ, ಮೃತ್ಯುಂಜಯ ಕಾನಿಟ್ಕರ್, ಎಸ್.ಎನ್.ಕೃಷ್ಣ, ಡಾ. ಎನ್.ಸತೀಶ್ಚಂದ್ರ, ದಿನೇಶ್, ಎಂ.ನಿತ್ಯಾ ಇತರರಿದ್ದರು.