ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 
ಶಿವಮೊಗ್ಗ

ನಿಷೇಧ ಹೇರಿದರೂ ಶಕ್ತಿಶಾಲಿಯಾಗಿ ಬೆಳೆದ ಆರ್‌ಎಸ್‌ಎಸ್ | RSS

ನವೀನ ಬಿ.ಎಂ

ಪ್ರಮುಖ ಮುಖ್ಯಾಂಶಗಳು

  • ಆಡಳಿತ ವೈಫಲ್ಯ ಮುಚ್ಚಿಡಲು ಸರ್ಕಾರ ಸುಳ್ಳು ಆರೋಪ
  • ಆರ್‌ಎಸ್‌ಎಸ್ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದರೆ ಬಹಿರಂಗಪಡಿಸಲಿ
  • ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು
ಶಿವಮೊಗ್ಗ: ಆರ್‌ಎಸ್‌ಎಸ್(RSS) ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದರೆ ಅದನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(B.Y.Vijayendra) ಸವಾಲೆಸೆದರು. 
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘದ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Home Minister Priyank Kharge) ಸೇರಿ ಕಾಂಗ್ರೆಸ್ ನಾಯಕರು ಅವಿವೇಕದಿಂದ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. 
ಆರ್‌ಎಸ್‌ಎಸ್ ಲಕ್ಷಾಂತರ ಯುವಕರಲ್ಲಿ ದೇಶಭಕ್ತಿ ಮೂಡಿಸುತ್ತಿದೆ. ಕಾಂಗ್ರೆಸ್ ಸರ್ಕಾರ(Congress government) ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಡಲು ಸಚಿವ ಪ್ರಿಯಾಂಕ್ ಖರ್ಗೆ ಮೂಲಕ ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಸುತ್ತಿದೆ ಎಂದು ದೂರಿದರು.
ಈ ಹಿಂದೆ ಪ್ರಧಾನಿಗಳಾಗಿದ್ದ ಜವಾಹರ್‌ಲಾಲ್ ನೆಹರು(Jawaharlal Nehru) ಹಾಗೂ ಇಂದಿರಾ ಗಾಂಧಿ(Indira Gandhi) ಅವರ ಕಾಲದಲ್ಲೂ ಆರ್‌ಎಸ್‌ಎಸ್ ಬ್ಯಾನ್ ಮಾಡಲು ಪ್ರಯತ್ನಿಸಲಾಗಿತ್ತು. ಮೂರು ಬಾರಿ ನಿಷೇಧ ಹೇರಿದರೂ ಆರ್‌ಎಸ್‌ಎಸ್ ಮತ್ತಷ್ಟು ಶಕ್ತಿಶಾಲಿಯಾಗಿ ಬೆಳೆದಿದೆ. ಹಿಂಬಾಗಿಲ ಮೂಲಕ ಸಂಘವನ್ನು ಮುಗಿಸಲು ಕಾಂಗ್ರೆಸ್‌ಗೆ ಎಂದಿಗೂ ಸಾಧ್ಯವಿಲ್ಲ ಎಂದರು.

ಎನ್‌ಕೌಂಟರ್ ಕೇಸ್ ಉನ್ನತ ತನಿಖೆಯಾಗಲಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಡಿನಲ್ಲಿ ಮೂವರ ಎನ್‌ಕೌಂಟರ್(Encounter) ಘಟನೆ ಕುರಿತು ರಾಜ್ಯ ಸರ್ಕಾರ ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಯಾರಾದರೂ ಬಂದೂಕು ಹಿಡಿದು ಬೇಟೆಗೆ ತೆರಳಿದ್ದಾರೆಂಬ ಕಾರಣಕ್ಕೆ ಅವರ ಮೇಲೆ ನೇರವಾಗಿ ಎನ್‌ಕೌಂಟರ್ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೀವ ಕಳೆದುಕೊಂಡವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಕ್ಷಣ ಸೂಕ್ತ ಹಾಗೂ ನ್ಯಾಯಯುತ ಪರಿಹಾರ ಘೋಷಿಸಬೇಕು ಎಂದು  ಆಗ್ರಹಿಸಿದರು.