ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಭೇಟಿ ನೀಡಿ ಸಂಚಾರ ಈ ಚಲನ್ ಪ್ರಕರಣಗಳಲ್ಲಿ ಪಾವತಿಸಬೇಕಾದ ದಂಡದ ಮೊತ್ತದ ಪ್ರಗತಿ ಪರಿಶೀಲಿಸಿದರು.  
ಶಿವಮೊಗ್ಗ

10 ದಿನದಲ್ಲಿ 46ಲಕ್ಷ ರೂ. ದಂಡ ಸಂಗ್ರಹ | Traffic violation

ಪ್ರಮುಖ ಮುಖ್ಯಾಂಶಗಳು

  • ಜು.10ರವರೆಗೆ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ
  • 2,99,037 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ
  • ನ್ಯಾಯಾಧೀಶ ಎಂ.ಎಸ್.ಸಂತೋಷ್ ಪಶ್ಚಿಮ ಸಂಚಾರ ಠಾಣೆಗೆ ಭೇಟಿ
ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆ(Traffic violation) ಪ್ರಕರಣಗಳಲ್ಲಿ ಶೇ.50ರಷ್ಟು ರಿಯಾಯಿತಿ ಮೇಲೆ ಈ-ಚಲನ್ ಮೂಲಕ ದಂಡ ಪಾವತಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಶಿವಮೊಗ್ಗದಲ್ಲಿ 10 ದಿನದಲ್ಲಿ 46 ಲಕ್ಷ ರೂ. ದಂಡ ಪಾವತಿ ಆಗಿದೆ.
ಜೂ.21ರಿಂದ ಜು.1ರವರೆಗೆ 10,778 ಈ-ಚಲನ್ ಪ್ರಕರಣ(E-challan case)ಗಳಲ್ಲಿ ವಾಹನ ಸವಾರರು ಶೇ.50ರಷ್ಟು ರಿಯಾಯಿತಿ ಸದುಪಯೋಗ ಪಡೆದು 46,06,500 ರೂ. ದಂಡ ಪಾವತಿಸಿದ್ದಾರೆ. ಸರ್ಕಾರ ಆದೇಶ ಹೊರಡಿಸಿದಾಗ ಶಿವಮೊಗ್ಗದಲ್ಲಿ 2,99,037 ಪ್ರಕರಣಗಳಿದ್ದು, 23,71,18,350 ರೂ. ದಂಡದ ಮೊತ್ತ ಪಾವತಿಗೆ ಬಾಕಿ ಇತ್ತು. ಇದೀಗ 10 ಸಾವಿರಕ್ಕೂ ಅಧಿಕ ಸವಾರರು ದಂಡ ಪಾವತಿಸಿದ್ದಾರೆ.
ನ್ಯಾಯಾಧೀಶರ ಪರಿಶೀಲನೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಅವರು ಮಂಗಳವಾರ ಸಂಜೆ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆ(West Traffic Station)ಗೆ ಭೇಟಿ ನೀಡಿ ಸಂಚಾರ ಈ ಚಲನ್ ಪ್ರಕರಣಗಳಲ್ಲಿ ಪಾವತಿಸಬೇಕಾದ ದಂಡದ ಮೊತ್ತದ ಪ್ರಗತಿ ಪರಿಶೀಲಿಸಿದರು. 
ಸರ್ಕಾರ ಆದೇಶ(Government order)ದ ಲಾಭ ಪಡೆದ ಬಗ್ಗೆ ಹಾಗೂ ದಂಡದ ಮೊತ್ತ ಸಂಗ್ರಹಿಸುವಲ್ಲಿ ಸಂಚಾರ ಪೊಲೀಸರ ಕಾರ್ಯ ಶ್ಲಾಘಿಸಿದರು. ಜು.10ರೊಳಗೆ ಬಾಕಿ ಉಳಿದ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಜನರು ದಂಡ ಪಾವತಿಸಿ ಸರ್ಕಾರಿ ಆದೇಶದ ಹೆಚ್ಚಿನ ಲಾಭ ಪಡೆಯಬೇಕೆಂದು ತಿಳಿಸಿದ್ದಾರೆ.