ಸಾಗರದ ಬ್ರಾಸಂನಲ್ಲಿ ಚರಕ ಮಹಿಳಾ ವಿವಿಧೋದ್ದೇಶ ಸಹಕಾರ ಸಂದಿಂದ ಆಯೋಜಿಸಿದ್ದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ, ಮಾರಾಟ ಮೇಳವನ್ನು ಗಾಯಕಿ ವಿದುಷಿ ವಸುಧಾ ಶರ್ಮ ಉದ್ಘಾಟಿಸಿ ಮಾತನಾಡಿದರು.  
ಶಿವಮೊಗ್ಗ

ಅವಸರದ ಬದುಕಿನಲ್ಲಿ ಹೆಚ್ಚುತ್ತಿದೆ ಅಪಾಯ

ಪ್ರಮುಖ ಮುಖ್ಯಾಂಶಗಳು

  • ಚರಕ ವಸ್ತುಗಳ ಪ್ರದರ್ಶನಕ್ಕೆ ಚಾಲನೆ
  • ವಿದುಷಿ ವಸುಧಾ ಶರ್ಮ ಅಭಿಮತ
  • ಅವಸರದ ಬದುಕಿನಲ್ಲಿ ಹೆಚ್ಚುತ್ತಿದೆ ಅಪಾಯ
ಸಾಗರ: ಅವಸರದ ಬದುಕಿನಲ್ಲಿ ಅಪಾಯ ಹೆಚ್ಚುತ್ತಿದೆ. ಆಹಾರದಿಂದ ಹಿಡಿದು ಎಲ್ಲ ೇತ್ರವೂ ಕಲುಷಿತಗೊಳ್ಳುತ್ತಿದೆ. ಆರೋಗ್ಯಕರ ಬದುಕಿಗೆ ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದು ಅತ್ಯಗತ್ಯ ಎಂದು ಹಿಂದೂಸ್ತಾನಿ ಸಂಗೀತ ಕಲಾವಿದೆ ವಿದುಷಿ ವಸುಧಾ ಶರ್ಮ ಹೇಳಿದರು.
ಸಾಗರದ ಬ್ರಾಸಂನಲ್ಲಿ ಶುಕ್ರವಾರ ಚರಕ ಮಹಿಳಾ ವಿವಿಧೋದ್ದೇಶ ಸಹಕಾರ ಸಂದಿಂದ ಆಯೋಜಿಸಿದ್ದ ಮೂರು ದಿನಗಳ ನೈಸರ್ಗಿಕ ಕೈಮಗ್ಗ ಮತ್ತು ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ದಿನಗಳಲ್ಲಿ ನಾವು ಒತ್ತಡದ ನಡುವೆಯೇ ದಿನ ಆರಂಭಿಸಿ ಮುಗಿಸುತ್ತೇವೆ. ಈ ನಡುವೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲು ಅನಿಸುತ್ತದೆ ಎಂದರು.
ಆರೋಗ್ಯ ರಣೆ ಮಾಡುವ ವಸ್ತುಗಳ ಬಳಕೆ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಬೇಕು. ಚರಕದ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿದ್ದು ಪ್ರಕೃತಿಗೆ ಪೂರಕವಾಗಿವೆ. ಇದನ್ನು ಬಳಸುವುದರಿಂದ ವೈಯಕ್ತಿಕ ಆರೋಗ್ಯ ಹಾಗೂ ಸಾಮಾಜಿಕ ಸ್ವಾಸ್ಥ$್ಯ ಎರಡನ್ನೂ ಕಾಪಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಚರಕ ಸಂಸ್ಥೆ ಉತ್ಪನ್ನಗಳನ್ನು ಎಲ್ಲರೂ ಪ್ರೋತ್ಸಾಹಿಸಬೆಕು. ಆಧುನಿಕ ಜಗತ್ತಿಗೆ ತೆರೆದುಕೊಳ್ಳುವ ತವಕದಲ್ಲಿ ನಾವು ದೇಶೀಯ ಚಿಂತನೆಗಳಿಂದ ದೂರ ಸರಿಯುತ್ತಿದ್ದೇವೆ. ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ರಂಗಕರ್ಮಿ ಪ್ರಸನ್ನ ಅವರು 30 ವರ್ಷದ ಹಿಂದೆ ಸ್ಥಾಪಿಸಿದ ಚರಕ ಸಂಸ್ಥೆ ಇಂದು ವಿಶಾಲವಾಗಿ ಬೆಳೆದಿದೆ. 700ಕ್ಕೂ ಹೆಚ್ಚು ಜನರಿಗೆ, ಅದರಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಚರಕ ಜೀವನದ ದಾರಿ ತೋರಿಸಿದೆ. ಇಂದು ಚರಕದ ವಸ್ತುಗಳು ರಾಜ್ಯ ಮಾತ್ರವಲ್ಲದೆ ಹೊರರಾಜ್ಯ, ವಿದೇಶಗಳಲ್ಲಿಯೂ ಪ್ರಖ್ಯಾತಿ ಪಡೆದಿದೆ. ಇತ್ತೀಚೆಗೆ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ನೀಡುವ ಅತ್ಯುತ್ತಮ ರಾಷ್ಟ್ರೀಯ ಬ್ರಾಂಡ್​ ನಿರ್ಮಾಣ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ಇಂತಹ ಮೇಳಗಳಿಂದ ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಚರಕ ಸಂಸ್ಥೆ ಅಧ್ಯೆ ಮಹಾಲ$್ಮ ಮಾತನಾಡಿ, ಮೂರು ದಿನಗಳ ಚರಕ ಉತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಚರಕ ಉತ್ಪನ್ನಗಳ ಜತೆಗೆ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸಹ ಆಯೋಜಿಸಲಾಗಿದೆ. ಸಾರ್ವಜನಿಕರು ಗ್ರಾಮೀಣ ಉದ್ಯೋಗವನ್ನು ಪ್ರೋತ್ಸಾಹಿಸಬೇಕು ಎಂದರು. ಚರಕ ಸಂಸ್ಥೆಯ ಎನ್​.ರಮೇಶ್​, ನಾಗರತ್ನ, ಪೀಟರ್​, ಕೃಷ್ಣ ಮತ್ತಿತರರಿದ್ದರು.