ಭದ್ರಾವತಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಟಿ.ಪೃಥ್ವಿರಾಜ್, ಗಣೇಶ್, ಎಂ.ವಿ.ಪಂಚಾಕ್ಷರಿ ಇತರರಿದ್ದರು. 
ಶಿವಮೊಗ್ಗ

ನಿವೃತ್ತ ಶಿಕ್ಷಕರಿಗೆ ತಾಲೂಕಿನ ಸಂಘದಿಂದ ಸನ್ಮಾನ

ಭದ್ರಾವತಿ: ಹಳೇನಗರದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾದ ವಡೇರಪುರದ ಎಚ್.ಯೋಗೇಂದ್ರಪ್ಪ, ಹನುಮಂತಪುರದ ಲೋಕೇಶಪ್ಪ, ಹಾಲಪ್ಪ ವೃತ್ತದ ಮೈಲಾರಪ್ಪ, ಹಿರಿಯೂರಿನ ಸಿ.ಎಚ್.ರುದ್ರಮ್ಮ, ನಂಜಾಪುರದ ಸರಸ್ವತಿ, ಯಶೋದಮ್ಮ, ಸೀಗೆಬಾಗಿ ಷಹರ್‌ಬಾನು, ಸಿರಿಯೂರಿನ ನೇತ್ರಾವತಿ, ಬಾಳೇಮಾರನಹಳ್ಳಿ ಇಂದ್ರಮ್ಮ ಮತ್ತು ಉಕ್ಕುಂದ ಪಿ.ಶಾಂತಾ ನಿವೃತ್ತಿ ಹೊಂದಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ.ಪೃಥ್ವಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ(ಪ್ರಭಾರ) ಗಣೇಶ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ವಿ.ಪಂಚಾಕ್ಷರಿ, ಸಿಆರ್‌ಪಿ ಪಂಚಪ್ಪ, ಸಿ.ಜಯಪ್ಪ, ಶ್ರೀಧರ್ ಗೌಡ, ಚಿತ್ರಾ, ಆಸ್ಮಾ ಬೇಗಂ, ಮಲ್ಲಿಕಾರ್ಜುನ, ಎಂ.ಸಿ.ಆನಂದ್, ಕೊಕೀಲಾ, ಎಚ್.ಭಾರತಿ, ಪಾರ್ವತಮ್ಮ, ಭರತ್ ಕುಮಾರ್ ಇತರರಿದ್ದರು.