ಶಿವಮೊಗ್ಗ: ಫೇಸ್ಬುಕ್ನಲ್ಲಿ ಬಂದಿದ್ದ ಜಾಹೀರಾತು ನಂಬಿದ ನಿವೃತ್ತ ಬ್ಯಾಂಕ್ ನೌಕರರೊಬ್ಬರು 2.29 ಲಕ್ಷ ರೂ. ಕಳೆದುಕೊಂಡಿದ್ದಾರೆ.
ನಿವೃತ್ತ ನೌಕರ ತನ್ನ ಮೊಬೈಲ್ನಲ್ಲಿ ಫೇಸ್ಬುಕ್ ನೋಡ್ತಿದ್ದಾಗ ಜಾಹೀರಾತು ಕಾಣಿಸಿಕೊಂಡಿದೆ. ಅದರಲ್ಲಿ ಪಿಂಚಣಿ ಬಗ್ಗೆ ಮಾಹಿತಿ ತುಂಬಿದ್ದರು. ತದನಂತರ ನಿವೃತ್ತ ನೌಕರನ ಮೊಬೈಲ್ಗೆ ವಂಚಕರು ಫೋನ್ ಮಾಡಿದ್ದರು. ಕರೆ ಸ್ವೀಕರಿಸಿದ ನಿವೃತ್ತ ನೌಕರನಿಗೆ ವಂಚಕರು ನಾವು ಕೆನರಾ ಬ್ಯಾಂಕ್ನವರೆಂದು ಪರಿಚಯಿಸಿಕೊಂಡಿದ್ದರು.
ನಂತರ ಲೈಫ್ ಸರ್ಟಿಫಿಕೇಟ್ ಬೇಕೆಂದು ದೂರುದಾರರ ಕಸ್ಟಮರ್ ಐಡಿ, ಹೆಸರು, ಜನ್ಮದಿನಾಂಕ, ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಪಿನ್ ನಂಬರ್ ಪಡೆದುಕೊಂಡಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ದೂರುದಾರರ ಖಾತೆಯಿಂದ ಹಂತ ಹಂತವಾಗಿ 2.29 ಲಕ್ಷ ರೂ. ಕಡಿತಗೊಂಡಿದೆ. ಬಳಿಕ ಮೋಸ ಹೋದ ನಿವೃತ್ತ ನೌಕರ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.