ಸಾಗರದ ಜೋಸಪ್ ನಗರದಲ್ಲಿನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಎಚ್.ಕೆ.ನಾಗಪ್ಪ, ಮದನ್, ವಿಠ್ಠಲ್ ಹೆಗಡೆ, ರಾಜೇಶ್ ಮುಂತಾದವರಿದ್ದರು.
ಸಾಗರ: ಬಿಜೆಪಿಯವರು ಅತ್ಯಂತ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅನುದಾನದ ಹೆಸರಿನಲ್ಲಿ ಪ್ಲೆಕ್ಸ್ ಅಳವಡಿಸಿ ಚಿಲ್ಲರೆ ರಾಜಕಾರಣ ಮಾಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇದು ಶೋಭೆ ತರುವಂತದ್ದಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಜೋಸಪ್ ನಗರದಲ್ಲಿ ಶನಿವಾರ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ವಿಶೇಷ ಅನುದಾನ ತಂದಿದ್ದೇನೆ ಎಂದರು.
ಹಣ ಬಂದಿಲ್ಲ ಎಂದು ಬಿಜೆಪಿಯವರು ಬೊಗಳೆ ಬಿಡುತ್ತಿದ್ದಾರೆ. ಯಾರು ಶಾಸಕರು ಇರುತ್ತಾರೋ ಅವರ ಅವಧಿಯಲ್ಲಿ ಒಂದಷ್ಟು ಅನುದಾನ ಬಿಡುಗಡೆಯಾಗಿರುತ್ತದೆ. ಅವರ ನಂತರ ಬರುವ ಮತ್ತೊಬ್ಬ ಶಾಸಕರು ಅದನ್ನು ವಿನಿಯೋಗ ಮಾಡುತ್ತಾರೆ. ಕಾಗೋಡು ತಿಮ್ಮಪ್ಪ ಅವರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಆಡಳಿತ ಸೌಧವನ್ನು ಹಾಲಪ್ಪ ಶಾಸಕರಾಗಿದ್ದಾಗ ಉದ್ಘಾಟನೆ ಮಾಡಿದ್ದಾರೆ. ಅವರ ಅವಧಿಯಲ್ಲಿ ಉಳಿದ ಸಣ್ಣಪುಟ್ಟ ಅನುದಾನದ ಕಾಮಗಾರಿ ಈಗ ನಡೆಯುತ್ತಿವೆ. ಅದನ್ನೇ ಪ್ಲೆಕ್ಸ್ ಹಾಕಿ ಪ್ರಚಾರ ಪಡೆದು ನಾನು ಅನುದಾನ ತಂದೆ ಇಲ್ಲ ಎನ್ನುವಂತೆ ಬಿಂಬಿಸಲು ಹೊರಟಿದ್ದು ಬಿಜೆಪಿ ಮೂರ್ಖತನ ಎಂದರು.
ಬಿಜೆಪಿಯವರಿಗೆ ್ಲೆಕ್ಸ್ ಹಾಕುವ ಹುಚ್ಚು ಇದ್ದರೆ ತಮ್ಮ ಮನೆ ಮುಂದೆ ಹಾಕಿಕೊಳ್ಳಲಿ. ವೃತ್ತಗಳಲ್ಲಿ ಹಾಕಿ ಜನರಿಗೆ ತಪ್ಪು ಸಂದೇಶ ನೀಡುವುದು ಬೇಡ. ಎಲ್ಲಿಂದ ಅನುದಾನ ತಂದು ೇತ್ರ ಅಭಿವೃದ್ಧಿ ಪಡಿಸಬೇಕೆಂಬುದು ನನಗೂ ಗೊತ್ತಿದೆ. ಮೂರು ಬಾರಿ ಶಾಸಕನಾಗಿದ್ದೇನೆ. ನಿಮ್ಮ ಸಾಧನೆ ಏನು ಎಂದು ಜನರಿಗೆ ತಿಳಿಸಿ, ಅದನ್ನು ಬಿಟ್ಟು ್ಲೆಕ್ಸ್ ರಾಜಕಾರಣ ಮಾಡುವುದನ್ನು ಬಿಡಲಿ ಎಂದು ತಿಳಿಸಿದರು. ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಅಧಿಕಾರಿಗಳಾದ ಮದನ್, ವಿಠ್ಠಲ್ ಹೆಗಡೆ, ರಾಜೇಶ್, ಕಾಂಗ್ರೆಸ್ ಮುಖಂಡರಾದ ಸುರೇಶಬಾಬು, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಡಿ.ದಿನೇಶ್, ಇಂಧೂಮತಿ ಇನ್ನಿತರರಿದ್ದರು.
ಜೋಸಪ್ ನಗರದಲ್ಲಿ ಶಂಕುಸ್ಥಾಪನೆ ವೇಳೆ ಸ್ಥಳಿಯ ಮುಖಂಡ ಅರುಣ್ ಪ್ರತಿಭಟನೆ ನಡೆಸಿದರು. ತಮ್ಮ ವಾರ್ಡ್ಗೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ ಶಂಕುಸ್ಥಾಪನಾ ಸ್ಥಳದಲ್ಲಿಯೇ ಪ್ರತಿಭಟಿಸಿದರು. ಶಾಸಕರು ಸ್ಪಂದಿಸಿ ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ದಾಖಲೆ ನೀಡುವೆ ರಾಜೀನಾಮೆ ನೀಡಲಿ
ಬಿಜೆಪಿ ನಗರ ಅಧ್ಯ ಪದೇಪದೆ ಆಸ್ಪತ್ರೆ ಅಭಿವೃದ್ಧಿಗೆ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರದ ಹಣ ಬಂದಿದೆ. ಅಭಿವೃದ್ಧಿ ನಾನು ಮುಂದುವರಿಸಿದ್ದೇನೆ. ನಾನು ದಾಖಲೆ ನೀಡಿದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಎಂದು ಪ್ರಶ್ನಿಸಿದರು.