ಶಿಕಾರಿಪುರದಲ್ಲಿ ಏರ್ಪಡಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ವಿಜಯಕುಮಾರ್ ನಾಡಿಗೇರ್, ವಾಣಿ, ಆರ್.ಡಿ. ಸತೀಶ್, ವಿನಯ್ ಆರಾಧ್ಯ, ಗಣಪತಿ ಭಟ್, ನರಸಿಂಹ ಜೋಯ್ಸ, ಹರೀಶ್ ಜೋಯ್ಸ, ತಡಗಣಿ ರಾಘವೇಂದ್ರ ಇತರರಿದ್ದರು. 
ಶಿವಮೊಗ್ಗ

ಸನಾತನ ಧರ್ಮದ ಪುನರುತ್ಥಾನ

ಶಿಕಾರಿಪುರ: ಅಲ್ಪಾಯುಷ್ಯದಲ್ಲಿಯೇ ಇಡೀ ಭಾರತವನ್ನು ಪಾದಯಾತ್ರೆಯಲ್ಲಿ ಸಂಚರಿಸಿ ಸನಾತನ ಧರ್ಮ ಪುನರುತ್ಥಾನ ಮಾಡಿದವರು ಜಗದ್ಗುರು ಶ್ರೀ ಆದಿ ಶಂಕರರು ಎಂದು ಪುರೋಹಿತ ವಿಜಯಕುಮಾರ್ ನಾಡಿಗೇರ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಅನ್ಯಧರ್ಮೀಯರಿಂದ ಹಿಂದು ಸನಾತನ ಧರ್ಮದ ಮೇಲೆ ಆಗುತ್ತಿದ್ದ ಅಪಾಯವನ್ನು ಗ್ರಹಿಸಿದ ಆಚಾರ್ಯರು ಸನಾತನ ಧರ್ಮೋತ್ಥಾನ ಕಾರ್ಯ ಮಾಡಿದರು. ಶಂಕರಾಚಾರ್ಯರು ಧರ್ಮೋದ್ಧಾರಕ ಶಿವನ ಅವತಾರ ಎಂದರು.
ತಹಸೀಲ್ದಾರ್ ವಾಣಿ ಮಾತನಾಡಿ, ಶಂಕರಾಚಾರ್ಯರು ಕೇವಲ 32 ವಷರ್ದ ಆಯುಷ್ಯದಲ್ಲಿ ನಾಡಿನಾದ್ಯಂತ ಸಂಚರಿಸಿ ಸನಾತನ ಧರ್ಮ ಜಾಗೃತಿ ಮೂಡಿಸಿದರು. ಶಂಕರರು ದೇಶದಾದ್ಯಂತ ಸಂಚರಿಸುತ್ತಿದ್ದಾಗ ತುಂಗಾ ನದಿಯ ತಟದಲ್ಲಿರುವ ಶೃಂಗೇರಿಗೆ ಬರುತ್ತಾರೆ. ಆ ಸ್ಥಳದ ಪಾವಿತ್ರೃಕ್ಕೆ  ಮಾರುಹೋದ ಶಂಕರರು, ಅಲ್ಲೇ ಮೊದಲ ಮಠವಾದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠವನ್ನು ಸ್ಥಾಪಿಸಿದರು ಎಂದು ಹೇಳಿದರು
ಶಿಕಾರಿಪುರ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಆರ್.ಡಿ.ಸತೀಶ್ ಮಾತನಾಡಿ, ಬ್ರಾಹ್ಮಣ ಸಮಾಜ ಅತ್ಯಂತ ಸ್ವಾಭಿಮಾನಿ ಸಮಾಜ, ಎಂತಹ ಸಂಕಷ್ಟಗಳು ಬಂದರೂ ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಆಚಾರ ವಿಚಾರಗಳನ್ನು ಬಿಡುವುದಿಲ್ಲ ಎಂದರು.
ಉಪತಹಸೀಲ್ದಾರ್ ವಿನಯ್ ಆರಾಧ್ಯ, ಸಮಾಜದ ಗಣಪತಿ ಭಟ್, ನರಸಿಂಹ ಜೋಯ್ಸ, ಹರೀಶ್ ಜೋಯ್ಸ, ರಾಘವೇಂದ್ರ , ಶ್ರೀಪತಿ, ವಿಶ್ವನಾಥ, ಪದ್ಮಾ ಪ್ರಕಾಶ್, ರೂಪಾ ವೆಂಕಟೇಶ್, ಸುನಿತಾ ಜೋಯ್ಸ, ಗೋಪಿ ಚಕ್ರವರ್ತಿ, ರಾಜು ದೀಕ್ಷಿತ್, ಅಂಜು ಭಟ್, ಪ್ರಕಾಶ್ ಹೋತನಕಟ್ಟೆ, ಶಿವು ಭಟ್, ಶ್ರೀದೇವಿ , ರಾಘವೇಂದ್ರ ಇತರರಿದ್ದರು.