ಶಿಕಾರಿಪುರದಲ್ಲಿ ನಡೆದ ಅತಿವೃಷ್ಟಿ, ಅನಾವೃಷ್ಟಿ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಧು ಬಂಗಾರಪ್ಪ, ಬಿ.ವೈ.ವಿಜಯೇಂದ್ರ, ನಗರದ ಮಹದೇವಪ್ಪ, ಪ್ರಭುಲಿಂಗ ಕವಳಿಕಟ್ಟಿ, ನಾಗರಾಜ್​, ವಾಣಿ, ಕುಮಾರ್​ ಇತರರಿದ್ದರು.  
ಶಿವಮೊಗ್ಗ

ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ

ಟಿ.ಎಚ್.ಸಂತೋಷ್ ಕುಮಾರ್
ಶಿಕಾರಿಪುರ: ಕಳೆದ ವರ್ಷ ಮಳೆಮಾಪಕ ಸರಿಯಾಗಿರದ ಕಾರಣ ಅಕ್ಕಪಕ್ಕದ ಮಳೆಮಾಪನ ಕೇಂದ್ರಗಳ ವರದಿ ಆಧರಿಸಿ ಬರಗಾಲ ರ್ನಿಣಯಿಸಿದ್ದರೆ ಅದು ಸರಿಯಾದ ಕ್ರಮವಲ್ಲ. 25 ಕೇಂದ್ರಗಳು ಹಾಳಾಗಿರುವುದು ವಿಮಾ ಕಂಪನಿಗಳಿಗೆ ವರದಾನವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಅತಿವೃಷ್ಟಿ, ಅನಾವೃಷ್ಟಿ ಕುರಿತು ಶನಿವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆಮಾಪನ ಕೇಂದ್ರಗಳಿಂದ ರೈತರಿಗೆ ತೊಂದರೆಯಾಗುತ್ತಿದೆ. ವಿಮಾ ಕಂಪನಿಗಳು ಲಾಭ ಮಾಡೋಕೆ ಬಂದಿರ್ತಾರೆ. ಅಧಿಕಾರಿಗಳು ರೈತರ ಬಗ್ಗೆ ಕಾಳಜಿ ಹೊಂದಿರಬೇಕು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ನಾಗರಾಜ್​ ಗೌಡ ಮಾತನಾಡಿ, ಏತ ನೀರಾವರಿ ಯೋಜನೆಯಲ್ಲಿ 600 ಕೆಜಿ ಭಾರದ 12 ಲ ರೂ. ಮೌಲ್ಯದ ಮೋಟಾರ್​ ತಂತಿಯನ್ನು ಕದ್ದಿರುವ ಬಗ್ಗೆ ತಿಳಿಸಿದರು. ಈ ವೇಳೆ ಆಕ್ರೋಶಗೊಂಡ ಸಚಿವ ಮಧು ಬಂಗಾರಪ್ಪ, ಇಂತಹ ಕೃತ್ಯಗಳು ಅಮ್ಯ. ಕದಿಯದ ಹಾಗೆ ಸುರಕ್ಷೆಗೆ ಗಮನಹರಿಸಬೇಕು. ಈ ಟನೆ ಸಂಬಂಧಿಸಿದ ಇಲಾಖೆಯ ಅಸಮರ್ಥತೆ ತೋರಿಸುತ್ತದೆ. ಸಾಕಷ್ಟು ಕಡೆಗಳಲ್ಲಿ ಪೈಪ್​ಲೈನ್​ ಹಾಳಾಗಿದೆ. ಅದನ್ನು ಮೊದಲು ಸರಿಪಡಿಸಬೇಕಿತ್ತು. ಹಿಂದಿನ ಕೆಡಿಪಿ ಸಭೆಗಳಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದೆ. ಅಧಿಕಾರಿಗಳ ಅಲ್ಯ ಕಂಡುಬರುತ್ತಿದೆ. ಮೊದಲು ಈ ಬಗ್ಗೆ ಹೆಚ್ಚಿನ ಗಮನ ನೀಡಿ. ದನಕರುಗಳಿಗೆ ಉಪಯುಕ್ತವಾದ ಏತ ನೀರಾವರಿ ಯೋಜನೆಯನ್ನು ರೈತರು ಸಮರ್ಥವಾಗಿ ಬಳಸಿಕೊಳ್ಳಬೇಕು. ವಿದ್ಯುತ್​ ಬಿಲ್​ಗೆ ಸಂಬಂಧಿಸಿದಂತೆ ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಶಿಕಾರಿಪುರ ತಾಲೂಕು ಎಜುಕೇಷನ್​ ಹಬ್​ ಆಗಿದೆ. ಗ್ರಾಮಾಂತರ ವಿದ್ಯಾರ್ಥಿಗಳು ನಗರಕ್ಕೆ ಬರಲು ತೊಂದರೆಯಾಗಿದ್ದು ಬಸ್​ಗಳ ವ್ಯವಸ್ಥೆ ಒದಗಿಸಬೇಕು. ಶಿಕಾರಿಪುರದಲ್ಲಿ ಅತ್ಯಂತ ಗುಣಮಟ್ಟದ ಶಿಣ ದೊರೆಯುತ್ತಿರುವುದರಿಂದ ಅಕ್ಕಪಕ್ಕದ ತಾಲೂಕುಗಳಿಂದ ವಿದ್ಯಾರ್ಥಿಗಳು ಬರುತ್ತಾರೆ ಎಂದರು.
ಈ ವರ್ಷದ ಕೃಷಿ ೇತ್ರದ ಬೆಳವಣಿಗೆ ಬಗ್ಗೆ ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಕೃಷಿ ನಿರ್ದೇಶಕ ಕಿರಣ್​ಕುಮಾರ್​ ಹರ್ತಿ, ಜೂನ್​ನಲ್ಲಿ ಮಳೆ ಕೊರತೆಯಿಂದ ಬಿತ್ತನೆ ಕಡಿಮೆಯಾಗಿ ಕೇವಲ 6 ಸಾವಿರ ಹೆಕ್ಟೇರ್​ ಬಿತ್ತನೆಯಾಗಿದೆ. 16 ಸಾವಿರ ಹೆಕ್ಟೇರ್​ ಮೆಕ್ಕೆಜೋಳ, 10 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಶೇ.70ರಷ್ಟು ಮೆಕ್ಕೆಜೋಳ ಬಿತ್ತನೆಯಾಗಿದೆ ಎಂದರು.
ಪಿಡಬ್ಲುಡಿ ಎಇಇ ಮಿಥುನ್​ ಮಾತನಾಡಿ, ಹೆಗ್ಗೆರೆ ಕೆರೆ ಡ್ಯಾಮೇಜ್​ ಇರುವುದರಿಂದ ರಿಪೇರಿ ಬಗ್ಗೆ ಪ್ರಸ್ತಾಪನೆ ಕಳಿಸಲಾಗಿದೆ. ಮುಡಬ ಸಿದ್ದಾಪುರದ ದೇವಿಕೆರೆ ಹಾಳಾಗಿದೆ. 54 ಲ ರೂ. ಅನುದಾನ ತಾತ್ಕಾಲಿಕ ದುರಸ್ತಿಗೆ ಅಗತ್ಯವಿದೆ ಎಂದು ಅಧಿ-ಕಾರಿಗಳು ಸಚಿವರ ಗಮನಕ್ಕೆ ತಂದರು.
ರಾಜ್ಯ ಕೃಷಿಕ ಸಮಾಜದ ಅಧ್ಯ ನಗರದ ಮಹದೇವಪ್ಪ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಇಒ ನಾಗರಾಜ್​, ತಹಸೀಲ್ದಾರ್​ ವಾಣಿ, ಆಡಳಿತ ವೈದ್ಯಾಧಿಕಾರಿ ಡಾ. ರವಿ ಇತರರಿದ್ದರು.