ಭದ್ರಾವತಿ ಜನ್ನಾಪುರದ ಇಎಸ್​ಐ ಆಸ್ಪತ್ರೆ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವೈದ್ಯಾಧಿಕಾರಿ ಡಾ.ಸಂಧ್ಯಾ ಅವರಿಗೆ ಮನವಿ ಸಲ್ಲಿಸಿದರು. ಸುರೇಶಪ್ಪ, ಧನುಷ್​, ಸುರೇಶ್​, ರಾಕೇಶ್​ ಇತರರಿದ್ದರು. 
ಶಿವಮೊಗ್ಗ

ಇಎಸ್​ಐ ರೆರಲ್​ ಸೌಲಭ್ಯ ಮರುಸ್ಥಾಪನೆಗೆ ಮನವಿ

ಭದ್ರಾವತಿ: ಜನ್ನಾಪುರದ ಇಎಸ್​ಐ ಡಿಸ್ಪೆನ್ಸರಿಯಲ್ಲಿ ಖಾಸಗಿ ಆಸ್ಪತ್ರೆಗಳ ರೆರಲ್​ (ಅನುಮೋದನೆ) ಸೌಲಭ್ಯ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ನಗರ ಹಾಗೂ ಗ್ರಾಮಾಂತರ ಬಿಜೆಪಿ ಮಂಡಲದಿಂದ ಇಎಸ್​ಐ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಸ್ಥಳಿಯವಾಗಿ ಅಗತ್ಯವಿರುವ ಖಾಸಗಿ ಆಸ್ಪತ್ರೆಗಳ ಒಪ್ಪಂದವನ್ನು ದೆಹಲಿಯ ಇಎಸ್​ಐ ಪ್ರಧಾನ ಕಚೇರಿ ಮಹಾನಿರ್ದೇಶಕರು ನವೀಕರಿಸಬೇಕು. ಭದ್ರಾವತಿಯಲ್ಲಿ ಸುಮಾರು 19 ಸಾವಿರ ಇಎಸ್​ಐ ಲಾನುಭವಿಗಳಿದ್ದು, ರೆೆರೆಲ್​ ಲೆಟರ್​ ಸಿಗುತ್ತಿಲ್ಲ. ಪ್ರಸ್ತುತ ಭದ್ರಾವತಿಯ ವಿಐಎಸ್​ಎಲ್​ ಸಂಸ್ಥೆಯೊಂದರಲ್ಲೇ ಸುಮಾರು 1400ಕ್ಕೂ ಹೆಚ್ಚು ಕಾರ್ಮಿಕರು ಇಎಸ್​ಐ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಇದರೊಂದಿಗೆ ಭದ್ರಾವತಿಯ ಸುತ್ತಮುತ್ತ ಇರುವ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 12 ರಿಂದ 13 ಸಾವಿರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ಈ ಕಾರ್ಮಿಕರಿಗೆ ಸಂಕಷ್ಟ ಎದುರಾಗಿರುವುದಾಗಿ ತಿಳಿಸಿದ್ದಾರೆ.
ಭದ್ರಾವತಿ ನಗರದ ಸಣ್ಣ ಪ್ರಮಾಣದ ಹೋಟೆಲ್​ಗಳು ವಾಣಿಜ್ಯ ಉದ್ಯಮಗಳಲ್ಲಿ ಕೆಲಸ ಮಾಡುವ ಸಾವಿರರು ಕಾರ್ಮಿಕರು ಮತ್ತು ಅವರ ಕುಟುಂಬಗಳು ಇಎಸ್​ಐ ಯೋಜನೆಯನ್ನು ಅವಲಂಬಿಸಿವೆ. ಇಎಸ್​ಐ ವಂತಿಗೆಯನ್ನು ಕಡಿತಗೊಳಿಸಲಾಗುತ್ತಿದೆ. ಆದರೂ ಪ್ರಯೋಜನ ದೊರೆಯುತ್ತಿಲ್ಲ. ಈ ಕುರಿತಂತೆ ತಣವೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಇಎಸ್​ಐ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂಧ್ಯಾ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ನಗರ ಮಂಡಲದ ಅಧ್ಯ ಜಿ. ಧರ್ಮ ಪ್ರಸಾದ್​, ಗ್ರಾಮಾಂತರ ಅಧ್ಯ ಕೆ.ಎಚ್​.ತೀರ್ಥಯ್ಯ, ಗುತ್ತಿಗೆ ಕಾರ್ಮಿಕ ಸಂದ ಅಧ್ಯ ಸುರೇಶ್​, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್​, ಸರಸ್ವತಿ, ಕೂಡ್ಲಿಗೆರೆ ಹಾಲೇಶ್​, ಮಂಜುನಾಥ್​, ಮಂಡಲಗಳ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್​, ರುರಾವ್​, ಹನುಮಂತ ನಾಯಕ್​, ಸುರೇಶಪ್ಪ, ಧನುಷ್​, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರದಿಪ್​ ಗೌಡರ್​ ಇದ್ದರು.