ಸಾಗರದ ನೆಹರು ಮೈದಾನದ ಬಳಿ ಬೀಳುವ ಸ್ಥಿತಿಯಲ್ಲಿದ್ದ ಮರಗಳನ್ನು ತೆರವುಗೊಳಿಸುತ್ತಿರುವುದು. 
ಶಿವಮೊಗ್ಗ

ಬೀಳುವ ಸ್ಥಿತಿಯಲ್ಲಿದ್ದ ಮರಗಳ ತೆರವು | Clearing of trees

ಸಾಗರ: ಪಟ್ಟಣದ ನೆಹರು ಮೈದಾನದ ವಾಕಿಂಗ್ ಟ್ರಾೃಕ್ ಸಮೀಪ ಮುರಿದು ಬೀಳುವ ಸ್ಥಿತಿಯಲ್ಲಿದ್ದ ಮರಗಳನ್ನು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಭಾನುವಾರ ಮರಗಳನ್ನು ತೆರವುಗೊಳಿಸಲಾಯಿತು.
ಭಾನುವಾರ ಬೆಳಗ್ಗೆ ವಾಯುವಿಹಾರಕ್ಕೆ ಬಂದಾಗ ಮರವೊಂದು ಮುರಿದು ಬೀಳುವ ಸ್ಥಿತಿಯಲ್ಲಿರುವುದನ್ನು ಗಮನಿಸಿ ನಿಸರ್ಗ ವಾಯು ವಿಹಾರಿಗಳ ಸಂಘದವರು ಶಾಸಕರ ಗಮನಕ್ಕೆ ತಂದರು. ಶಾಸಕರ ಸೂಚನೆ ಹಿನ್ನೆಲೆಯಲ್ಲಿ ನಗರಸಭೆ, ಮೆಸ್ಕಾಂ, ಅರಣ್ಯ ಇಲಾಖೆ ಸಿಬ್ಬಂದಿ ಜನರ ಮನವಿಗೆ ಸ್ಪಂದಿಸಿದ್ದಾರೆ. ವಿಪರೀತ ಗಾಳಿ, ಮಳೆಯಿಂದ ನಗರಸಭೆ ಎದುರಿನ ಕೆಳಭಾಗದ ರಸ್ತೆಯಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ವಾಹನ, ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿತ್ತು. ತಕ್ಷಣ ನಗರಸಭೆಯಿಂದ ತೆರವುಗೊಳಿಸಲಾಯಿತು.
ನಗರಸಭೆ ಎದುರು ರೈತರು ತರಕಾರಿ ಮಾರಾಟ ಮಾಡುತ್ತಿರುವ ಪಾರ್ಕ್ ಪಕ್ಕದಲ್ಲಿ ದೊಡ್ಡ ಮರಗಳ ರೆಂಬೆ, ಕೊಂಬೆಗಳು ಮುರಿದುಬೀಳುವ ಸ್ಥಿತಿಯಲ್ಲಿವೆ. ತುಂಬ ಜನನಿಬಿಡ ಸ್ಥಳವಾಗಿರುವುದರಿಂದ ನಗರಸಭೆ ಅಧಿಕಾರಿಗಳು ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಮಳೆಗಾಲ ಮುಗಿಯುವವರೆಗೆ ತರಕಾರಿ ಮಾರಾಟ ಮಾಡಲು ರೈತರಿಗೆ ಪರ್ಯಾಯ ಸ್ಥಳ ಗುರುತಿಸಿಕೊಡುವಂತೆ ಒತ್ತಾಯಿಸಿದ್ದಾರೆ.