ಚುರ್ಚಿಗುಂಡಿಯಲ್ಲಿ ಶ್ರೀ ಆಂಜನೇಯ ಸ್ವಾಮಿ ನೂತನ ದೇವಾಲಯದ ಪ್ರವೇಶೋತ್ಸವದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ, ಶಶಿಧರ್​, ಎಚ್​.ಜಿ.ರುದ್ರಗೌಡ , ಸುಧೀರ್​ ಇತರರಿದ್ದರು. 
ಶಿವಮೊಗ್ಗ

ಧಾರ್ಮಿಕ ಆಚರಣೆಗಳು ಹಿರಿಯರ ಬಳುವಳಿ

ಶಿಕಾರಿಪುರ: ಜಾತ್ರೆ, ಉತ್ಸವ, ಆರಾಧನೆ ಮತ್ತು ಧಾರ್ಮಿಕ ಆಚರಣೆಗಳು ನಮ್ಮ ಹಿರಿಯರು ನಮಗೆ ಬಿಟ್ಟು ಹೋದ ಬಳುವಳಿ ಎಂದು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಚುರ್ಚಿಗುಂಡಿಯಲ್ಲಿ ನಡೆದ ಆಂಜನೇಯ ಸ್ವಾಮಿ ನೂತನ ದೇವಾಲಯದ ಪ್ರವೇಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಭಕ್ತರು ಮತ್ತು ಭಗವಂತನ ನಡುವೆ ಅನಾದಿಕಾಲದಿಂದಲೂ ಗುರುಪರಂಪರೆ ಸೇತುವಾಗಿ ಕೆಲಸ ಮಾಡುತ್ತಿದೆ ಎಂದರು.
ಮಹಾಶರಣ ಸಿದ್ದರಾಮೇಶ್ವರರು ಸಾಮಾಜಿಕ ಕಳಕಳಿ ಮೂಲಕ ಜನಮನದಲ್ಲಿ ದೈವತ್ವ ಪಡೆದಂತಹ ಮಹಾಪುರುಷ. ಸಮಾಜ ಕಟ್ಟುವಲ್ಲಿ ಇಂತಹ ಮಹಾಪುರುಷರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ನೊಳಂಬ ವೀರಶೈವ ಸಮಾಜ ಆ ಕಾರಣದಿಂದಲೇ ಇಂದು ಸಿದ್ದರಾಮೇಶ್ವರರನ್ನು ಗುರುವಾಗಿ ಆರಾಧಿಸುತ್ತಿದೆ ಎಂದು ಹೇಳಿದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ನಿರಂತರ ಧರ್ಮ ಕಾರ್ಯಗಳಿಂದ ನಮ್ಮ ಮನಸಿನ ಕಲ್ಮಶ ದೂರವಾಗುತ್ತದೆ. ಸದ್ವಿಚಾರಗಳು ಪರಿಶುದ್ಧತೆ ಕಡೆಗೆ ಕೊಂಡೊಯ್ಯುತ್ತವೆ. ನಮ್ಮ ಮುಂದಿನ ಪೀಳಿಗೆಗೆ ಈ ಮಣ್ಣಿನ ಶ್ರೇಷ್ಠತೆ ತಿಳಿಸಬೇಕು. ಧಾರ್ಮಿಕ ಆಚರಣೆಯಿಂದ ನಾವು ಎಂದಿಗೂ ವಿಮುಖರಾಗಬಾರದು. ಅನಾದಿ ಕಾಲದಿಂದಲೂ ಮಠ ಮಂದಿರಗಳು ನಮ್ಮನ್ನು ಸಾತ್ವಿಕ ಬದುಕಿನತ್ತ ಕೊಂಡೊಯ್ಯುತ್ತಿವೆ ಎಂದರು.
ಆಂಜನೇಯ ದೇವಸ್ಥಾನ ಸಮಿತಿ ಅಧ್ಯ ಶಶಿಧರ್​ ಚುರ್ಚಿಗುಂಡಿ ಮಾತನಾಡಿ, ಶ್ರೀ ಆಂಜನೇಯ ಸ್ವಾಮಿ ದೇಗುಲ ನಿರ್ಮಿಸಬೇಕೆಂಬ ಭಕ್ತರ ಕನಸು ಈಗ ನನಸಾಗಿದೆ. ಕೇವಲ ಭಕ್ತರ ಸಹಕಾರದಿಂದ ಸುಮಾರು 45 ಲ ರೂ. ವೆಚ್ಚದಲ್ಲಿ ಮಂದಿರ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮದರ್ಶಿ ಸಮಿತಿ ಅಧ್ಯ ಎಚ್​.ಜಿ.ರುದ್ರಗೌಡ, ತಾಲೂಕು ವೀರಶೈವ ಸಮಾಜದ ಅಧ್ಯ ಸುಧೀರ್​, ಉದ್ಯಮಿ ಬಾಲಕೃಷ್ಣನ್​, ಬಿ.ಎಂ.ಪಾಲಾಪ್ಪ, ಕೆ.ಬಿ.ರಾಮಲಿಂಗಪ್ಪ ಇತರರಿದ್ದರು.
ಧರ್ಮದ ದಾರಿ ಎಂದರೆ ಅದು ನಮ್ಮ ಬದುಕಿನ ಉಜ್ಜೀವನದ ಹೆದ್ದಾರಿ. ನಾವು ಸದಾ ಧರ್ಮ ಮಾರ್ಗದಲ್ಲಿ ಸಾಗಬೇಕು. ನಮ್ಮ ಶ್ರೇಷ್ಠ ತೆ ಅಡಗಿರುವುದೇ ನಮ್ಮ ಸಂಸತಿಯಲ್ಲಿ. ನಮ್ಮ ಹಿರಿಯರು ಕಲಿಸಿದ ಸಂಸ್ಕಾರ ನಮ್ಮನ್ನು ಸಮಾಜದ ಅತ್ಯುತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ.
> ಶ್ರೀಚನ್ನಬಸವ ಸ್ವಾಮೀಜಿ, ವಿರಕ್ತ ಮಠ