ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
- 400ಕ್ಕೂ ಅಧಿಕ ಪುರೋಹಿತರಿಂದ ರುದ್ರಪಠಣದೊಂದಿಗೆ ಧಾರ್ಮಿಕ ಕಾರ್ಯಕ್ರಮ
- ಸಾವಿರಾರು ದಂಪತಿಗಳಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ
- 600ಕ್ಕೂ ಹೆಚ್ಚು ಮಾತೆಯರಿಂದ ಮಂಗಳನಿಧಿ ಸಮರ್ಪಣೆ, ಸಂಗೀತಾಭಿವಂದನೆ
ಶಿವಮೊಗ್ಗ: ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋ ೈನಾನ್ಸ್, ಕೆ.ಎಸ್.ಈಶ್ವರಪ್ಪ ಅಭಿಮಾನಿಗಳ ಬಳಗ ಹಾಗೂ ರಾಷ್ಟ್ರಭಕ್ತರ ಬಳಗದಿಂದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನ(K.S.Eshwarappa's birthday)ದ ಪ್ರಯುಕ್ತ ಜೂ.10ರಂದು ನಗರದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10ಕ್ಕೆ ಮಲ್ಲೇಶ್ವರನಗರ ಗುಂಡಪ್ಪ ಶೆಡ್‌ನಲ್ಲಿರುವ ಈಶ್ವರಪ್ಪ ಅವರ ಮನೆ ಆವರಣದಲ್ಲಿ 400ಕ್ಕೂ ಅಧಿಕ ಪುರೋಹಿತರಿಂದ ರುದ್ರಪಠಣದೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭವಾಗುತ್ತದೆ. ಸಾವಿರಾರು ದಂಪತಿಗಳಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ(Satyanarayana puje)ಯಲ್ಲಿ ಪಾಲ್ಗೊಳ್ಳುವರು. 600ಕ್ಕೂ ಹೆಚ್ಚು ಮಾತೆಯರಿಂದ ಮಂಗಳನಿಧಿ ಸಮರ್ಪಣೆ, ಸಂಗೀತಾಭಿವಂದನೆ ನಡೆಯಲಿದೆ ಎಂದು ರಾಷ್ಟ್ರಭಕ್ತರ ಬಳಗ(Rastrabhaktara balaga)ದ ಪ್ರಮುಖ ಇ.ವಿಶ್ವಾಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ಭದ್ರಾವತಿ ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.
ನಾಲ್ಕನೇ ವಾರ್ಡ್‌ನ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಜೋಡಿಯಾಕ್ ಪ್ರಕಾಶ್ ನೇತೃತ್ವದಲ್ಲಿ ತರಳಬಾಳು ಬಡಾವಣೆ(Taralubalu badavane) ಸಾರ್ವಜನಿಕ ಉದ್ಯಾನದಲ್ಲಿ ಈಶ್ವರಪ್ಪ ಅವರ 78ನೇ ಜನ್ಮದಿನದ ಅಂಗವಾಗಿ 78 ಗಿಡಗಳನ್ನು ನೆಡುವರು. ವಿನೋಬನಗರದಲ್ಲಿ ಜೆ.ಪಿ.ಶ್ರೀಕಾಂತ್ ಅವರು 100 ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಹಣ್ಣು ವಿತರಿಸುವರು ಎಂದು ಹೇಳಿದರು.
ಬಳಗದ ಪ್ರಮುಖರಾದ ಎಸ್.ಜಿ.ಬಾಲು, ಸುವರ್ಣಾ ಶಂಕರ್, ಶಿವಾಜಿ, ನವುಲೆ ಈಶ್ವರಪ್ಪ, ರಮೇಶ್ ಜಾದವ್, ಜೆ.ಪಿ.ಶ್ರೀಕಾಂತ್, ಆಶಾ ಚನ್ನಬಸಪ್ಪ, ಲಕ್ಷ್ಮೀ ಶಂಕರ್‌ನಾಯಕ್, ವೆಂಕಟೇಶ್, ರಾಜು, ಕುಬೇರಪ್ಪ, ಚನ್ನಬಸಪ್ಪ, ಸೂರ್ಯನಾರಾಯಣ ಸುದ್ದಿಗೋಷ್ಠಿಯಲ್ಲಿದ್ದರು.
"
ಕೆ.ಎಸ್.ಈಶ್ವರಪ್ಪ ಅವರು ರಾಜಕೀಯದ ಜತೆ ಆಧ್ಯಾತ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದಾರೆ. ಅವರು ನಡೆದು ಬಂದ ಹಾದಿ ಯುವ ರಾಜಕಾರಣಗಳಿಗೆ ಸ್ಫೂರ್ತಿದಾಯಕವಾಗಿದೆ. ಸೋಲು-ಗೆಲುವುಗಳ ನಡುವೆಯೂ ಸಿದ್ಧಾಂತಕ್ಕೆ ಬದ್ಧರಾಗಿರುವುದೇ ಈಶ್ವರಪ್ಪ ಅವರ ವ್ಯಕ್ತಿತ್ವದ ವಿಶೇಷ.
— ಇ.ವಿಶ್ವಾಸ್, ರಾಷ್ಟ್ರಭಕ್ತರ ಬಳಗದ ಪ್ರಮುಖ