ಸೊರಬದ ಗುಂಡಶೆಟ್ಟಿಕೊಪ್ಪದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಮಾತನಾಡಿದರು. ತ್ಯಾಗರಾಜ್, ಕೆ.ನಿಂಗಪ್ಪ ಇತರರಿದ್ದರು. 
ಶಿವಮೊಗ್ಗ

ಕ್ರೀಡೆಯಿಂದ ಮಾನಸಿಕ ಒತ್ತಡ ನಿವಾರಣೆ

ಸೊರಬ: ದೇಶಿಯ ಕ್ರೀಡೆ ಉಳಿಸುವಲ್ಲಿ ಯುವಜನರ ಪಾತ್ರ ಹಿರಿದು. ನಶಿಸುತ್ತಿರುವ ಕ್ರೀಡೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
ತಾಲೂಕಿನ ಗುಂಡಶೆಟ್ಟಿಕೊಪ್ಪದಲ್ಲಿ ಶ್ರೀ ವೀರಭದ್ರೇಶ್ವರ ಗೆಳೆಯರ ಬಳಗದಿಂದ ಶ್ರೀ ವೀರಭದ್ರೇಶ್ವರ ದೇವರ ವಾರ್ಷಿಕೋತ್ಸವ ಹಾಗೂ ಗುಗ್ಗಳ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ದೇಶಿಯ ಕ್ರೀಡೆಗಳು ಮಾಯವಾಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನರು ಮುಂದಾಗುತ್ತಿರುವುದು ಶ್ಲಾಘನೀಯ. ಮಾನಸಿಕ ಒತ್ತಡ ನಿವಾರಣೆಗೆ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ ಎಂದರು.
ಗ್ರಾಮ ಸಮಿತಿ ಅಧ್ಯಕ್ಷ ತ್ಯಾಗರಾಜ್ ಮಾತನಾಡಿ, ಕ್ರೀಡೆಯಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
ಚನ್ನಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ನಿಂಗಪ್ಪ, ಈರೇಶ್, ಉಪನ್ಯಾಸಕ ರವಿ ಕಲ್ಲಂಬಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಂ.ತೋಟಪ್ಪ, ಉಮಾಕಾಂತ, ಹನುಮಂತಪ್ಪ, ದಾನಶೇಖರ್, ಶ್ರೀಧರ್, ದೇವರಾಜ್, ನಿರಂಜನ್, ಲೋಕೇಶ್, ಚಂದ್ರು, ಶಿಕ್ಷಕ ಚಂದ್ರಕಾಂತ್, ನಾಗರಾಜ್, ಕೇಶವ, ಮಂಜು, ಮೇಘರಾಜ್, ವಸಂತ್ ಇತರರಿದ್ದರು.