ಮಾದೇಶ್​ ಪ್ರಭು 
ಶಿವಮೊಗ್ಗ

ಅತಿಥಿ ಉಪನ್ಯಾಸಕ ಕರ್ತವ್ಯದಿಂದ ಬಿಡುಗಡೆ

ಟಿ.ಎಚ್.ಸಂತೋಷ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ನಕಲಿ ಪಿಎಚ್​.ಡಿ ಪ್ರಮಾಣ ಪತ್ರ ಸಲ್ಲಿಕೆ
  • ಅತಿಥಿ ಉಪನ್ಯಾಸಕ ಕರ್ತವ್ಯದಿಂದ ಬಿಡುಗಡೆ
  • ನಕಲಿ ಪಿಎಚ್​.ಡಿ ಪ್ರಮಾಣ ಪತ್ರ ಸಲ್ಲಿಕೆ
ಶಿಕಾರಿಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025&26ನೇ ಶೈಣಿಕ ವರ್ಷದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಾದೇಶ ಪ್ರಭು ಎಂಬುವವರನ್ನು ನಕಲಿ ಪಿಎಚ್​.ಡಿ ಪ್ರಮಾಣ ಪತ್ರ ನೀಡಿರುವ ಹಿನ್ನೆಲೆಯಲ್ಲಿ ಕಾಲೇಜು ಮಟ್ಟದ ಪರಿಶೀಲನಾ ಸಮಿತಿ ಶುಕ್ರವಾರ ಸಭೆ ನಡೆಸಿ ಕರ್ತವ್ಯದಿಂದ ಬಿಡುಗಡೆ ಮಾಡಿದೆ.
ಸಾಗರದ ಇಂದಿರಾ ಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು, ಕಳೆದ ವರ್ಷ ಡಿಸೆಂಬರ್​ನಲ್ಲಿ ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಾದೇಶ್​ ಪ್ರಭು ವಾಣಿಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಉತ್ತರ ಪ್ರದೇಶದ ಜಾನ್ಸಿಯ ಬುಂದೇಲ್​ಖಂಡ ಯುನಿವರ್ಸಿಟಿಯಲ್ಲಿ 2015ರಲ್ಲಿ ಕ್ಯಾಂಪಸ್​ ಕೋರ್ಸ್​ ವಿಭಾಗದಲ್ಲಿ ಪಿಎಚ್​. ಡಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದರು.
ಪ್ರಮಾಣ ಪತ್ರಗಳ ನೈಜತೆ ವರದಿಯನ್ನು ಕಡ್ಡಾಯವಾಗಿ ಸಂಬಂಧಿಸಿದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಿಂದ ನೈಜತೆ ಪರಿಶೀಲಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮಾದೇಶ್​ ಪ್ರಭು ಅವರ ಪಿಎಚ್​.ಡಿ ಪ್ರಮಾಣಪತ್ರವನ್ನು ನೈಜತೆ ಪರೀೆಗಾಗಿ ಕಳುಹಿಸಿದಾಗ ನಕಲಿ ಎಂದು ತಿಳಿದುಬಂದಿದೆ. ನಕಲಿ ಎಂಬುದು ದೃಢಗೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಚಾರ್ಯ ಚನ್ನಪ್ಪ ಸಭೆ ನಡೆಸಿ ಮಾದೇಶ್​ ಪ್ರಭು ಅವರನ್ನು ಬಿಡುಗಡೆಗೊಳಿಸಿದ್ದಾರೆ.
ಸರ್ಕಾರದ ಸುತ್ತೋಲೆ ಬಂದ ಹಿನ್ನೆಲೆಯಲ್ಲಿ ನೈಜತೆ ಪರಿಶೀಲನೆಗೆ ಕಳಿಸಿದಾಗ ಸತ್ಯಾಂಶ ತಿಳಿದು ಬಂದಿದೆ. ಆ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕ ಮಾದೇಶ್​ ಪ್ರಭು ಅವರ ಪಿಎಚ್​.ಡಿ ದಾಖಲೆ ನಕಲಿ ಆಗಿರುವುದರಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
> ಚನ್ನಪ್ಪ, ಪ್ರಾಚಾರ್ಯ