ಭದ್ರಾ ಎಡ ಹಾಗೂ ಬಲದಂಡೆ ನಾಲೆಗಳಲ್ಲಿ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಭದ್ರಾ ಪ್ರಾಜೆಕ್ಟ್ ಇಂಜಿನಿಯರ್‌ಗೆ ಮನವಿ ಸಲ್ಲಿಸಿದರು. ಮಂಜುಳಾ, ಜಿ.ಧರ್ಮಪ್ರಸಾದ್, ಕೆ.ಎಚ್.ತೀರ್ಥಯ್ಯ ಇತರರಿದ್ದರು. 
ಶಿವಮೊಗ್ಗ

ಭದ್ರಾ ನಾಲೆಗಳಲ್ಲಿ ನೀರು ಹರಿಸಿ | Protest

ಶಿವಕುಮಾರ ಎಸ್.ಪಿ.
ಭದ್ರಾವತಿ: ಭದ್ರಾ ಎಡ ಹಾಗೂ ಬಲದಂಡೆ ನಾಲೆಗಳಲ್ಲಿ ಕೂಡಲೇ ನೀರು ಹರಿಸಬೇಕೆಂದು ತಾಲೂಕು ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಬಿ.ಆರ್.ಪ್ರಾಜೆಕ್ಟ್‌ನಲ್ಲಿರುವ ನೀರಾವರಿ ಇಲಾಖೆ ಇಂಜಿನಿಯರ್ ರವಿಚಂದ್ರ ಅವರಿಗೆ ಮನವಿ ಸಲ್ಲಿಸಿದರು.
ಈ ಬಾರಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿದೆ. ತೋಟಗಳು, ಹೊಲ, ಗದ್ದೆಗಳಿಗೆ ನೀರಿನ ಅಗತ್ಯತೆ ಇದೆ. ಭದ್ರಾ ಅಣೆಕಟ್ಟೆಯಿಂದ ಸೋರಿಕೆಯಾಗುತ್ತಿರುವ ನೀರು ಅನಾವಶ್ಯಕವಾಗಿ ಭದ್ರಾ ನದಿ ಸೇರುತ್ತಿದೆ. ಸೋರಿಕೆಯ ನೀರು ನಾಲೆಗಳಲ್ಲಿ ಹರಿದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಮನವಿ ಸ್ವೀಕರಿಸಿದ ಇಲಾಖೆ ಇಂಜಿನಿಯರ್, ಜ.2ರಂದು ತುರ್ತು ಸಭೆ ಕರೆದು ರೈತರ ಸಮಸ್ಯೆಗಳನ್ನು ಚರ್ಚಿಸಲಾಗುವುದು. ನಿಮ್ಮ ಪ್ರಸ್ತಾವನೆ ಮಂಡಿಸಿ ತಕ್ಷಣದಿಂದ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ನಗರ ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಗ್ರಾಮಾಂತರ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ರಘುರಾಮ್, ಮಂಗೋಟೆ ರುದ್ರೇಶ್, ಸಿಮೆಂಟ್ ಮಂಜಣ್ಣ, ಜಿ.ಆನಂದಕುಮಾರ್, ನಕುಲ್, ವಿಶ್ವನಾಥ್, ನಿರಂಜನ್, ರಾಜೇಶ್, ಧನುಷ್, ಸುಧಾ ಇತರರಿದ್ದರು.