ಸೊರಬದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯ ಡಾ. ಮಾನಸ ಉದ್ಘಾಟಿಸಿದರು. ಎಚ್.ಮಲ್ಲಿಕಾರ್ಜುನ್, ಶಂಕರ್ ಶೇಟ್, ಡಿ.ಮಂಜುನಾಥ್, ರೂಪಾ ಶ್ರೀನಾಥ್, ಸುನೀತಾ ಇತರರಿದ್ದರು.
- ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ
- ಮಲ್ಲಿಕಾರ್ಜುನ ಮುರುರಾಜೇಂದ್ರ ಶ್ರೀ ಹೇಳಿಕೆ
- ಜ್ಞಾನ ವೃದ್ಧಿಗೆ ಪುಸ್ತಕಗಳು ಪೂರಕ
ಸೊರಬ: ಮನುಷ್ಯನ ನಡೆ, ನುಡಿ, ಆಚಾರ, ವಿಚಾರಗಳನ್ನು ತಿದ್ದುವಲ್ಲಿ ಶರಣರ ವಚನಗಳು, ಸಾಹಿತ್ಯ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸತಿಕ ವೇದಿಕೆಯಿಂದ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಮತ್ತು ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಎತ್ತಿನ ಗಾಡಿ ಸರಿಯಾಗಿ ಸಾಗಲು ಕಬ್ಬಿಣದ ಕಡೆಗೀಲು ಹೇಗೆ ಮುಖ್ಯವೋ ಹಾಗೆಯೇ ಮದವೇರಿದ, ಅಹಂಕಾರ ತುಂಬಿಕೊಂಡ, ಕಡುದರ್ಪದಿಂದ ನಡೆಯುವ ಮನುಷ್ಯನನ್ನು ಸಮಾಜದಲ್ಲಿ ಸರಿದಾರಿಗೆ ತರಲು ಶರಣರ ವಚನಗಳು ಮುಖ್ಯವಾಗಿವೆ. ವಚನಗಳಲ್ಲಿ ಮನುಷ್ಯನ ಜೀವನ ಪರಿವರ್ತಿಸುವಂತಹ ಶಕ್ತಿ ಇದೆ ಎಂದರು.
ನಮ್ಮ ಆಚಾರ, ವಿಚಾರಗಳನ್ನು ಸಾಹಿತ್ಯದ ಮೂಲಕ ಅರಿತು, ಜ್ಞಾನ ಸಂಪಾದನೆ ಹೆಚ್ಚಿಸಿಕೊಳ್ಳಬೇಕು. ಕನ್ನಡ ಕಟ್ಟುವಲ್ಲಿ ನಾಡಿನ ಮಹಾನ್ ವ್ಯಕ್ತಿಗಳ ತ್ಯಾಗವಿದೆ. ಹಿಂದಿನವರು ಕನ್ನಡದ ತೇರನ್ನು ಇಲ್ಲಿಯವರೆಗೆ ಎಳೆದು ತಂದಿದ್ದಾರೆ. ಆದರೆ ಇಂದಿನ ಯುವಜನತೆ ಮೊಬೈಲ್ ಗೀಳಿನಿಂದ ಓದುವ ಹವ್ಯಾಸವನ್ನೇ ಮರೆತಿದ್ದಾರೆ. ಇಂತಹ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಔಚಿತ್ಯಪೂರ್ಣ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಆಧ್ಯಕ್ಷೆ ಡಾ. ಮಾನಸ ಮಾತನಾಡಿ, ರಾಜ್ಯದಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ರಚನಾತ್ಮಕವಾಗಿ ನಡೆಯುತ್ತಿದೆ. ಪ್ರಕೃತಿಗಿಂತ ದೊಡ್ಡ ಪ್ರಾಧ್ಯಾಪಕ ಇನ್ನೊಬ್ಬ ಇಲ್ಲ. ಆದರೂ ಬದಕನ್ನು ಅರ್ಥಮಾಡಿಕೊಳ್ಳಲು ಪುಸ್ತಕ ಓದಬೇಕು. ಪುಸ್ತಕ ಓದುವುದರಿಂದ ತಿಳಿವಳಿಕೆ ಹೆಚ್ಚಾಗಿ ಬದುಕಿನ ಪಥ ಬದಲಾಗಲಿದೆ ಎಂದರು.
ಆಕಾಶವಾಣಿ ಕಲಾವಿದ ಎಚ್.ಗುರುಮೂರ್ತಿ, ಗಾಯಕ ಜೈಕುಮಾರ ಶಿಗ್ಗಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಆಯೋಜಕ ಎಚ್.ಮಲ್ಲಿಕಾರ್ಜುನ್, ಕನ್ನಡ ಸಾಹಿತ್ಯ ಮತ್ತು ಸಂಸತಿ ವೇದಿಕೆ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ತಾಲೂಕು ಅಧ್ಯ ಶಂಕರ್ ಶೇಟ್, ಜಾನಪದ ಕಲಾವಿದ ಗುಡ್ಡಪ್ಪ ಜೋಗಿ, ರೂಪಾ ಶ್ರೀನಾಥ್, ಚಂದ್ರಶೇಖರ ನಿಜಗುಣ, ಹುಚ್ಚರಾಯಪ್ಪ, ಸುನೀತಾ, ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ, ಮಹೇಶ್ ಖಾರ್ವಿ ಇತರರಿದ್ದರು.
ಕನ್ನಡ ಪುಸ್ತಕ ಕೊಳ್ಳುವವರಿಲ್ಲ ಎಂಬ ಕೊರಗಿದೆ. ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ಪುಸ್ತಕ ಎಂಬುದು ಕೇವಲ ಸರಕಾಗಬಾರದು. ಆದೊಂದು ಸಂಸತಿಯಾಗಿ ಮನೆಮನೆಯ ಜ್ಞಾನದ ಸಂಪತ್ತಾಗಿ, ತನ್ನ ಅಸ್ತಿತ್ವವನ್ನು ತಾನೇ ಕಾಪಾಡಿಕೊಳ್ಳಲಿ ಎಂಬ ವೈಜ್ಞಾನಿಕ ಆಶಯದ ತಳಹದಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂೆ ಯೋಜನೆಯೇ ಮನೆಗೊಂದು ಗ್ರಂಥಾಲಯ.
> ಡಾ. ಮಾನಸ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ