ಮಳೆಯಿಂದ ಒದ್ದೆಯಾದ ಎನ್‌ಇಎಸ್ ಮೈದಾನದಲ್ಲಿ ದೊಡ್ಡ ಪರದೆ ಮೇಲೆ ಪ್ರಸಾರಗೊಂಡ ಐಪಿಎಲ್ ಪಂದ್ಯವನ್ನು ಬೆರಳೆಣಿಕೆಯಷ್ಟು ಅಭಿಮಾನಿಗಳು ವೀಕ್ಷಿಸಿದರು.
- ಕೋಲ್ಕತ ನೈಟ್ ರೈಡರ್ಸ್-ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ
- ಅಭಿಮಾನಿಗಳು ನಿರಾಸೆ ಮೂಡಿಸಿದ ವರುಣನ ಆರ್ಭಟ
- ಬೃಹತ್ ಎಲ್‌ಇಡಿ ಪರದೆ ಮೇಲೆ ಪಂದ್ಯದ ನೇರ ಪ್ರಸಾರ
ಶಿವಮೊಗ್ಗ: ನಗರದ ಎನ್‌ಇಎಸ್ ಮೈದಾನದಲ್ಲಿ ಶನಿವಾರ ಸಂಜೆ ಬಿಸಿಸಿಐ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್‌ಗೆ ಮಳೆ ಅಡ್ಡಿ(rain disrupt)ಯಾಯಿತು. ಕೋಲ್ಕತ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಮುಂದಾಗಿದ್ದ ಅಭಿಮಾನಿಗಳು ವರುಣನ ಆರ್ಭಟ ನಿರಾಸೆ ಮೂಡಿಸಿತು.
ಬೃಹತ್ ಎಲ್‌ಇಡಿ ಪರದೆ ಮೇಲೆ ಪಂದ್ಯದ ನೇರ ಪ್ರಸಾರಕ್ಕೆ ಕೆಎಸ್‌ಸಿಎ ಶಿವಮೊಗ್ಗ ವಲಯದ ಆಶ್ರಯದಲ್ಲಿ ಟಾಟಾ ಐಪಿಎಲ್(Tata IPL) ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಗುಡುಗು-ಮಿಂಚು ಸಹಿತ ಭಾರಿ ಮಳೆಗೆ ಇಡೀ ಮೈದಾನ ಒದ್ದೆಯಾಯಿತು.
ಮನೆಯಲ್ಲಿ ಟಿವಿ ಮತ್ತು ಮೊಬೈಲ್‌ಗಳಲ್ಲಿ ಐಪಿಎಲ್ ಪಂದ್ಯ ನೋಡಿ ಬೇಸರಗೊಂಡು ಫ್ಯಾನ್‌ಪಾರ್ಕ್(Fan Park)ಗೆ ಬರಲು ಮುಂದಾಗಿದ್ದ ಅಭಿಮಾನಿಗಳ ಆಸೆಗೆ ಮಳೆ ತಣ್ಣೀರು ಎರೆಚಿತು. ಇಡೀ ಮೈದಾನದಲ್ಲಿ ಮಳೆ ನೀರು ನಿಂತಿದ್ದ ಕಾರಣ ದೊಡ್ಡ ಪರದೆ ಮೇಲೆ ಕ್ರಿಕೆಟ್ ನೋಡಲು ಬಂದಿದ್ದ ಜನರು ನಿಂತುಕೊಂಡೇ ಪಂದ್ಯ ವೀಕ್ಷಣೆ ಮಾಡಿದರು.