ಶಿಕಾರಿಪುರದಲ್ಲಿ ರಾಯರ ಮಠದ ಪ್ರಾಂಗಣಕ್ಕೆ ನೀರು ನುಗ್ಗಿರುವುದು. 
ಶಿವಮೊಗ್ಗ

ರಾಘವೇಂದ್ರ ಸ್ವಾಮಿ ಮಠ ಜಲಾವೃತ

ಶಿಕಾರಿಪುರ: ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಪಟ್ಟಣದ ಶ್ರೀರಾಘವೇಂದ್ರ ಸ್ವಾಮಿ ಮಠ ಜಲಾವೃತವಾಗಿತ್ತು. ಭಾರಿ ಮಳೆ ಆಗಮಿಸಿದಾಗ ಮಠದ ಸುತ್ತಲೂ ನೀರು ಆವರಿಸುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.
ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಎದುರು ತಗ್ಗು ಇರುವುದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಶನಿವಾರ ರಾತ್ರಿ ಒಂದು ಗಂಟೆಗೂ ಹೆಚ್ಚಿನ ಅವಧಿ ಮಳೆ ಸುರಿದಿದೆ. ತಾಲೂಕಿನ ಎಲ್ಲ ಹೋಬಳಿಗಳಲ್ಲಿಯೂ ಮಳೆಯಾಗಿದ್ದು, ತಾಳಗುಂದ, ಉಡುಗಣಿ ಹೋಬಳಿಗಳಲ್ಲಿ ಹೆಚ್ಚಿನ ಮಳೆಯಾಗಿದೆ.