ಶಿವಮೊಗ್ಗದ ನ್ಯಾಯಾಲಯ 
ಶಿವಮೊಗ್ಗ

ವರದಕ್ಷಿಣೆ ಕಿರುಕುಳ ನೀಡಿದ್ದವಗೆ ಶಿಕ್ಷೆ | Dowry Harassment

ನವೀನ ಬಿ.ಎಂ

ಪ್ರಮುಖ ಮುಖ್ಯಾಂಶಗಳು

  • ವರದಕ್ಷಿಣೆ ಕಿರುಕುಳ ನೀಡಿದ್ದ ಹುಣಸೋಡು ಗ್ರಾಮದ ವ್ಯಕ್ತಿ
  • ಮೂರು ವರ್ಷ ಸಾದಾ ಶಿಕ್ಷೆ ಮತ್ತು 10 ಸಾವಿರ ರೂ. ದಂಡ
  • ಮಹಿಳಾ ಠಾಣೆಗೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದ ಕಾವ್ಯ
ಶಿವಮೊಗ್ಗ: ವರದಕ್ಷಿಣೆ ಕಿರುಕುಳ(Dowry Harassment) ನೀಡಿದ ವ್ಯಕ್ತಿಗೆ ಶಿವಮೊಗ್ಗದ 2ನೇ ಜೆಎಂಎಫ್‌ಸಿ ನ್ಯಾಯಾಲಯ(JMFC Court)ವು ಮೂರು ವರ್ಷ ಸಾದಾ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮ(Hunasod Village) ಶ್ರೀನಿವಾಸ ಶಿಕ್ಷೆಗೆ ಒಳಗಾದವರು. ಇವರ ವಿರುದ್ಧ ಎಚ್.ಕಾವ್ಯ ಎಂಬುವರು ಹೆಚ್ಚಿನ ವರದಕ್ಷಿಣೆ ಕಿರುಕುಳ ನೀಡಿದ್ದರೆಂದು 2023ರಲ್ಲಿ ಶಿವಮೊಗ್ಗದ ಮಹಿಳಾ ಠಾಣೆಗೆ ದೂರು ನೀಡಿದ್ದರು.
ಶ್ರೀನಿವಾಸ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ(Indictment List) ಸಲ್ಲಿಕೆಯಾಗಿತ್ತು. ಈ ಬಗ್ಗೆ ವಿಚಾರ ನಡೆಸಿದ ನ್ಯಾಯಾಧೀಶ ಎನ್.ಕೆ.ಸಿದ್ದರಾಜು ಅವರು ಆರೋಪ ಸಾಬೀತಾಗಿದ್ದರಿಂದ ಶ್ರೀನಿವಾಸ್‌ಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರಿ ಸಹಾಯಕ ಅಭಿಯೋಜಕ(Assistant Government Prosecutor) ಜಿ.ಕೆ.ಕಿರಣ್‌ಕುಮಾರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.