ಶಿವಮೊಗ್ಗ ಎಸ್‌ಪಿ ಬಿ.ನಿಖಿಲ್ 
ಶಿವಮೊಗ್ಗ

ಪಬ್ಲಿಕ್ ಐ ವಾಟ್ಸ್‌ಆ್ಯಪ್ ಚಾನಲ್ ಆರಂಭ । Public Eye

ಪ್ರಮುಖ ಮುಖ್ಯಾಂಶಗಳು

  • ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆ ವಿಶೇಷ ಕಾಳಜಿ
  • ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಲು, ದೂರು ಸ್ವೀಕರಿಸಲು ಕ್ರಮ
  • ಸುದ್ದಿಗೋಷ್ಠಿಯಲ್ಲಿ ನೂತನ ಎಸ್ಪಿ ಬಿ.ನಿಖಿಲ್ ಹೇಳಿಕೆ
ಶಿವಮೊಗ್ಗ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜತೆಗೆ ಕಾನೂನುಬಾಹಿರ ಚಟುವಟಿಕೆ ಮಟ್ಟಹಾಕಲು ಇಲಾಖೆ ವಿಶೇಷ ಕಾಳಜಿ ವಹಿಸಲಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಲು, ದೂರು ಸ್ವೀಕರಿಸಲು ಪಬ್ಲಿಕ್ ಐ(Public Eye) ವಾಟ್ಸ್‌ಆ್ಯಪ್ ಚಾನಲ್(WhatsApp channel) ಆರಂಭಿಸಲಾಗುವುದು ಎಂದು ಎಸ್‌ಪಿ  ಬಿ.ನಿಖಿಲ್ ತಿಳಿಸಿದರು. 
ಸಾರ್ವಜನಿಕ ಸಮಸ್ಯೆಗಳು ಏನೇ ಇದ್ದರೂ ಆ ಗ್ರೂಪ್‌ನಲ್ಲಿ ತಿಳಿಸಿದರೆ ತಕ್ಷಣ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಆನ್‌ಲೈನ್ ವಂಚನೆ(Online fraud),ಡ್ರಗ್ಸ್ ಜಾಲ, ಮಕ್ಕಳ ಸುರಕ್ಷೆ, ಪೋಕ್ಸೋ(Pocso) ಸೇರಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲೆಗಳು ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 15 ದಿನಕ್ಕೊಮ್ಮೆ ಆರಕ್ಷಕರ ದಿನ(Police Day)ವನ್ನು ಆಚರಿಸಲಾಗುವುದು ಎಂದರು.
ಪೊಲೀಸ್(Police) ಅಂದರೆ ಭಯವಲ್ಲ, ಅದೊಂದು ಭರವಸೆ(Hope). ಕಾನೂನಿಗೆ ಯಾರು ಗೌರವ ಕೊಡುತ್ತಾರೋ ಅವರಿಗೆ ಪೊಲೀಸ್ ಇಲಾಖೆಯೂ ಗೌರವ ನೀಡಲಿದೆ. ತಪ್ಪು ಮಾಡಿದವರಿಗೆ ತಕ್ಕ ಪಾಠವನ್ನೂ ಕಲಿಸಲಿದೆ ಎಂದು ಎಚ್ಚರಿಸಿದರು. 
ಹೆಲ್ಮೆಟ್(Helmet) ಅನ್ನು ಪೊಲೀಸರ ಭಯ ಅಥವಾ ದಂಡಕ್ಕೆ ಧರಿಸುವುದಲ್ಲ. ಕುಟುಂಬದವರಿಗಾಗಿ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಹೆದ್ದಾರಿ ಪ್ರಾಧಿಕಾರ, ಪಿಡಬ್ಲುೃಡಿ ಸಹಯೋಗದಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತೆಗೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
"

ಶಿವಮೊಗ್ಗ ಜಿಲ್ಲೆಯ ಕೋಮು ಸೂಕ್ಷ್ಮತೆ ಗಮನದಲ್ಲಿಟ್ಟುಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಸಂಘರ್ಷಗಳಿಗೆ ಕಡಿವಾಣ ಹಾಕಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಬದ್ಧವಾಗಿದೆ. ಸಾರ್ವಜನಿಕರ ಸಹಕಾರವೂ ಅಗತ್ಯ.