ಸೊರಬ ತಾಲೂಕಿನ ಆನವಟ್ಟಿಯಲ್ಲಿ ಎಸ್ಐಆರ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ನಡೆಸಲಾಯಿತು. ಟಿ.ಜಗದೀಶ್, ಚಂದನ್, ಮುನೀರ್ ಖಾನ್ ಇತರರಿದ್ದರು.
- ಎಸ್ಐಆರ್ ಜಾಗೃತಿ ಅಭಿಯಾನ
- ಪ್ರಾಚಾರ್ಯ ಜಗದೀಶ್ ಹೇಳಿಕೆ
- ಬಿಎಲ್ಒಗಳಿಗೆ ಸೂಕ್ತ ಮಾಹಿತಿ ನೀಡಿ
ಸೊರಬ: ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಚುನಾವಣಾ ಆಯೋಗ ಮತದಾರರ ವಿಶೇಷ ಪರಿಷ್ಕರಣೆ ಯೋಜನೆ ಅನುಷ್ಠಾನ ಮಾಡಿದೆ. ಹಾಗಾಗಿ ಮನೆಗೆ ಬರುವ ಬಿಎಲ್ಒಗಳಿಗೆ ಸೂಕ್ತ ಮಾಹಿತಿ ನೀಡಿ ಎಂದು ಪ್ರಾಚಾರ್ಯ ಜಗದೀಶ್ ಹೇಳಿದರು.
ಆನವಟ್ಟಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಶುಕ್ರವಾರ ಆನವಟ್ಟಿಯಲ್ಲಿ ಆಯೋಜಿಸಿದ್ದ ಎಸ್ಐಆರ್ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಪಿಎಸ್ಐ ಚಂದನಕಮಾರ ಚಲುವಾದಿ ಮಾತನಾಡಿ, ಯಾರೊಬ್ಬರೂ ಮತದಾನದಿಂದ ವಂಚಿತ ಆಗಬಾರದು ಎಂದು ಮತದಾನದ ಪರಿಷ್ಕರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಬೇಕು ಎಂಬ ಉದ್ದೇಶದಿಂದ ಜಾಗೃತಿ ಮೂಡಿಸಲಾಗುತ್ತದೆ. ಎಲ್ಲರೂ ಮತದಾನದ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಪ್ರಾಚಾರ್ಯ ಟಿ.ಜಗದೀಶ್, ಪಿಎಸ್ಐ ಚಂದನ್, ಎನ್ಎಸ್ಎಸ್ ಸಮನ್ವಯ ಅಧಿಕಾರಿ ಮುನೀರ್ಖಾನ್, ಉಪನ್ಯಾಸಕರಾದ ಪುಷ್ಪಾ, ಶಶಿಕಲಾ, ಅರುಣ್ಕುಮಾರ್, ಬಸವರಾಜ್ ಇತರರಿದ್ದರು.