ಅವೈಜ್ಞಾನಿಕ ಬೆಳೆ ವಿಮೆ ಪರಿಹಾರ ನೀಡಿರುವುದನ್ನು ಖಂಡಿಸಿ ಗುರುವಾರ ಡಿಸಿ ಕಚೇರಿ ಎದುರು ಅಡಿಕೆ ಬೆಳೆಗಾರರು ಪ್ರತಿಭಟನೆ ನಡೆಸಿದರು. ಪುರುಷೋತ್ತಮ ಬೆಳ್ಳಕ್ಕ, ಬಿ.ಆರ್.ಜಯಂತ್, ಇಂದೂಧರ ಗೌಡ, ಕೆರೆಕೈ ಪ್ರಸನ್ನ ಇತರರಿದ್ದರು. 
ಶಿವಮೊಗ್ಗ

ವೈಜ್ಞಾನಿಕವಾಗಿ ವಿಮಾ ಪರಿಹಾರ ಒದಗಿಸಲಿ ಆಗ್ರಹಿಸಿ ಪ್ರತಿಭಟನೆ crop insurence

ಶಿವಮೊಗ್ಗ: ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲೂಕುಗಳ ಅಡಿಕೆ ಬೆಳೆಗಾರರು ರಸ್ತೆಗಿಳಿದ ಪರಿಣಾಮ ಗುರುವಾರ ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ಕೆಲ ತಾಸು ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ಶಿವಮೊಗ್ಗ: ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲೂಕುಗಳ ಅಡಿಕೆ ಬೆಳೆಗಾರರು ರಸ್ತೆಗಿಳಿದ ಪರಿಣಾಮ ಗುರುವಾರ ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ಕೆಲ ತಾಸು ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ಅಡಿಕೆ ಬೆಳೆಗಾರರ ಮೆರವಣಿಗೆಯಿಂದ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಸಂಚಾರ ಸಿಕ್ಕಿನಿಂದ ನಾಗರಿಕರು ಪರಿತಪಿಸುವಂತಾಯಿತು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರು ಪ್ರತಿಭಟನೆ ಸೇರುತ್ತಾರೆ ಎಂಬ ಅಂದಾಜಿಲ್ಲದ ಪೊಲೀಸ್ ಇಲಾಖೆ ಕಕ್ಕಾಬಿಕ್ಕಿಯಾಯಿತು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನಿಂದ ಆರಂಭವಾದ ಅಡಿಕೆ ಬೆಳೆಗಾರರ ಪ್ರತಿಭಟನೆ ಬಿ.ಎಚ್ ರಸ್ತೆ, ನೆಹರು ರಸ್ತೆ, ಗೋಪಿ ವೃತ್ತ, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಡಿಸಿ ಕಚೇರಿ ತಲುಪಿತು. ಪ್ರತಿಭಟನಾಕಾರರಿಗೆ ಸ್ಥಳಾವಕಾಶದ ಕೊರತೆಯಿಂದ ರಸ್ತೆ ಮೇಲೆ ನಿಲ್ಲುವಂತಾಯಿತು.

ನಿಟ್ಟೂರಿನ ಶೋಧಾ ಎಫ್‌ಪಿಒ, ಶೋಧಾ ಬೆಳೆ ವಿಮೆ ಹೋರಾಟ ಸಮಿತಿ, ಮ್ಯಾಮ್ಕೋಸ್, ಆಪ್ಸ್‌ಕೋಸ್, ಅಡಿಕೆ ಬೆಳೆಗಾರರ ಸಂಘ, ತೋಟಗಾರ್ಸ್, ಅನ್ನಾವರ ಕಂಪನಿ, ತುಂಗಾ ಅಡಿಕೆ ಮಂಡಿ, ಕೊಡಚಾದ್ರಿ, ಶಾರದಾ, ಸುಮೇಧ ವಿವಿಧೋದ್ದೇಶ ಸಹಕಾರ ಸಂಘ, ಕಳೂರು, ತ್ರಿಣಿವೆ, ಮೂಡುಗೊಪ್ಪ, ಸಂಪೆಕಟ್ಟೆ, ನಿಟ್ಟೂರು, ಎಸ್‌ಎಸ್ ಬೋಗ್, ಬ್ಯಾಕೋಡು, ತುಮರಿ ಭಾಗದ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ವಿವಿಧ ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಸಕ್ರಿಯವಾಗಿದ್ದವು.

ಗೋಪಿ ವೃತ್ತ ಹಾಗೂ ಮಹಾವೀರ ವೃತ್ತದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ವಿಮಾ ಕಂಪನಿ ಹಾಗೂ ಆಡಳಿತಶಾಹಿ ವಿರುದ್ಧ ಆಕ್ರೋಶ ಹೊರಹಾಕಿ ಘೋಷಣೆಗಳನ್ನು ಕೂಗಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ರೈತರ ಅಹವಾಲು ಆಲಿಸಿದರು.

ವಿವಿಧ ಅಡಿಕೆ ಸಹಕಾರ ಸಂಸ್ಥೆಗಳ ಪ್ರಮುಖರು, ಇಂದೂಧರ ಗೌಡ, ರಮಾಕಾಂತ್ ಮತ್ತಿಮನೆ, ಕೆರೆಕೈ ಪ್ರಸನ್ನ, ಮಲ್ಲಿಕಾರ್ಜುನ ಹಕ್ರೆ, ಕಲ್ಸೆ ಚಂದ್ರಪ್ಪ, ಪ್ರಭಾವತಿ ಚಂದ್ರಕಾಂತ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.