ಶಿಕಾರಿಪುರದ ಮಾರಿಕಾಂಬಾ ದೇವಾಲಯ ಸಮಿತಿಯಿಂದ ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಶ್ರೀಗಳನ್ನು ಗೌರವಿಸಲಾಯಿತು. ಬಿ.ವೈ. ರಾಘವೇಂದ್ರ, ಕರಿಬಸಪ್ಪ, ಲೋಕೇಶ್, ಶಿವಪ್ಪ ಪೂಜಾರ್, ಸುಧೀರ್ ಮಾರವಳ್ಳಿ, ಸುರೇಶ್ ಇತರರಿದ್ದರು
ಶಿಕಾರಿಪುರ: ದೇವರ ಚಿಂತನೆಯಿಂದ ಮನಸು ದ್ವೇಷಗಳಿಂದ ಮುಕ್ತವಾಗುತ್ತದೆ. ಧರ್ಮದ ದಾರಿಯಲ್ಲಿ ನಾವು ನಡೆದರೆ ನಮ್ಮನ್ನು ಧರ್ಮ ನೆರಳಿನಂತೆ ಕಾಪಾಡುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕಿನ ಬಗನಕಟ್ಟೆ ಗ್ರಾಮದಲ್ಲಿ ಮಂಗಳವಾರ ಶ್ರೀ ಮಾರಿಕಾಂಬೆ ದೇವಾಲಯ ಉದ್ಘಾಟನೆ, ನೂತನ ಶಿಲಾಮೂರ್ತಿ ಸ್ಥಾಪನೆ, ಪ್ರಾಣಪ್ರತಿಷ್ಠಾಪನೆ ಮತ್ತು ಕಲಶಾರೋಹಣ ಮಹೋತ್ಸವದಲ್ಲಿ ಮಾತನಾಡಿದರು.
ಭಗವತಿಯ ಅನುಗ್ರಹದಿಂದ ನಾಡು ಸುಖ, ಸಮೃದ್ಧಿ ಹೊಂದಲಿ. ರೈತರ ಬದುಕು ಹಸನಾಗಲಿ. ನಾಡಿನಲ್ಲಿ ಮಠ ಮಂದಿರಗಳು, ಗುರುಗಳು ನಿರಂತರವಾಗಿ ಧರ್ಮೋತ್ಥಾನ ಕಾರ್ಯದಲ್ಲಿ ತೊಡಗಿದ್ದಾರೆ. ಗುರುಪರಂಪರೆ ಧಾರ್ಮಿಕ ಚಿಂತನೆಗಳನ್ನು ಪಸರಿಸುತ್ತಿವೆ. ಸಹನೆ, ಶಾಂತಿ, ಸಂಯಮ, ಸಹಬಾಳ್ವೆ ನಮ್ಮ ನಿತ್ಯಮಂತ್ರವಾಗಬೇಕು ಎಂದು ಹೇಳಿದರು.
ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಗೌಡ, ದೇವಸ್ಥಾನ ಸಮಿತಿ ಅಧ್ಯಕ್ಷ ಕರಿಬಸಪ್ಪ, ಸುಧೀರ್ ಮಾರವಳ್ಳಿ, ವೈ.ಬಿ.ಲೋಕೇಶ್, ಶಿವಪ್ಪ ಪೂಜಾರ್, ಸುರೇಶ್ ಇತರರಿದ್ದರು.