ಜೋಗದಲ್ಲಿ ರೋಪ್ವೇ ಕೇಬಲ್ ಕಾರು ನಿರ್ಮಾಣಕ್ಕೆ ಸಂಬಂಧಿಸಿ ಸಾಗರ ತಹಸೀಲ್ದಾರ್ ಡಾ. ಆರ್.ಪ್ರತಿಭಾ ಭೇಟಿ ನೀಡಿ ವೀಕ್ಷಿಸಿದರು. ಹನುಮಂತಪ್ಪ, ಬೀರಪ್ಪ, ಸಂದೀಪ್ ಇದ್ದರು.
- ತಹಸೀಲ್ದಾರ್ ಡಾ. ಆರ್.ಪ್ರತಿಭಾ ಹೇಳಿಕೆ
- ಮಾದರಿ ತಾಣವಾಗಿ ಜೋಗದ ಅಭಿವೃದ್ಧಿಗೆ ಆದ್ಯತೆ
ಸಾಗರ: ತಾಲೂಕನ್ನು ಮಾದರಿ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಅಗತ್ಯ ಗಮನ ಹರಿಸುತ್ತಿದ್ದು, ಜೋಗ ಜಲಪಾತವನ್ನು ಮತ್ತಷ್ಟು ಆಕರ್ಷಣೀಯಗೊಳಿಸುವ ಕೆಲಸಗಳು ನಡೆಯುತ್ತಿವೆ ಎಂದು ತಹಸೀಲ್ದಾರ್ ಡಾ. ಆರ್.ಪ್ರತಿಭಾ ಹೇಳಿದರು.
ಜೋಗದಲ್ಲಿ ಶುಕ್ರವಾರ ರೋಪ್ವೇ ಕೇಬಲ್ ಕಾರು ನಿರ್ಮಾಣಕ್ಕೆ ಸರ್ವೇ ನಡೆಸಿ ಮಾತನಾಡಿ, ರೋಪ್ವೇ ಹಾಗೂ ಕೇಬಲ್ ಕಾರು ಚಾಲನೆಗೆ ಸಂಬಂಧಿಸಿ ಸರ್ವೇ ಕಾರ್ಯ ಮುಗಿದಿದೆ. ಶ್ರೀ ಕಾಮಗಾರಿ ಪ್ರಾರಂಭಗೊಳ್ಳಲಿದೆ. ದೇಶ ವಿದೇಶದ ಜನರ ಗಮನ ಸೆಳೆಯುವಲ್ಲಿ ಜೋಗ ಜಲಪಾತ ತನ್ನದೇ ಆದ ವಿಶೇಷತೆ ಹೊಂದಿದೆ ಎಂದು ತಿಳಿಸಿದರು.
ಜೋಗ ಜಲಪಾತವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಅನೇಕ ಯೋಜನೆಗಳು ಅನುಷ್ಠಾನದಲ್ಲಿದೆ. ಅದರ ಮುಂದುವರಿದ ಭಾಗವಾಗಿ ರೋಪ್ವೇ ಕೇಬಲ್ ಕಾರು ನಿರ್ಮಾಣವಾಗುತ್ತಿದೆ ಎಂದರು.
ಮಳೆ ಆರಂಭವಾಗುತ್ತಿದ್ದಂತೆ ಜೋಗ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಲಿದೆ. ಅಗತ್ಯ ಕಾಮಗಾರಿ ನಡೆಯುತ್ತಿದ್ದರೂ ಪ್ರವಾಸಿಗರಿಗೆ ಜೋಗ ವೀಣೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ನಂತರ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಲಿದೆ. ಪ್ರವಾಸಿಗರ ರಣೆ ದೃಷ್ಟಿಯಿಂದಲೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯ ಹನುಮಂತಪ್ಪ, ಬೀರಪ್ಪ, ಸಂದೀಪ್ ಇದ್ದರು.