ಸಾಗರ ತಾಲೂಕಿನ ಎಂ.ಲಿಂಗದಹಳ್ಳಿಯಲ್ಲಿ ಜೀರ್ಣೋದ್ಧಾರವಾದ ಕೆರೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿದರು. ಎಲ್.ಆರ್.ಸುಬ್ರಾಯ, ದತ್ತಾತ್ರೇಯ ಹೆಗಡೆ, ಎಂ.ಜಿ.ಚಂದ್ರಶೇಖರ್ ಇತರರಿದ್ದರು. 
ಶಿವಮೊಗ್ಗ

ಜಲಮೂಲ ರಕ್ಷಣೆಗೆ ಆದ್ಯತೆ | Development work

ಶಿವಕುಮಾರ ಎಸ್.ಪಿ.
ಸಾಗರ: ಜಲಮೂಲ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ. ಮಡಸೂರು ಲಿಂಗದಹಳ್ಳಿಯ ವಿಶಾಲವಾದ ಕೆರೆ ಹೂಳಿನಿಂದ ತುಂಬಿತ್ತು. ಕೆರೆ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದರಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ ನೀಡಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ತಾಲೂಕಿನ ಎಂ.ಲಿಂಗದಹಳ್ಳಿಯಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ, ಧರ್ಮಸ್ಥಳ ಯೋಜನೆ, ಶ್ರೀರಾಮ ಮೆಮೋರಿಯಲ್ ಫೌಂಡೇಶನ್, ಪಡವಗೋಡು ಗ್ರಾಪಂನಿಂದ ಪುನರುಜ್ಜೀವನಗೊಂಡ ಕೆರೆ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಯೋಜನೆಯಿಂದ 15 ಲಕ್ಷ, ನನ್ನ ಅನುದಾನದಿಂದ 15 ಲಕ್ಷ ರೂ. ನೀಡಿ ಕೆರೆ ಅಭಿವೃದ್ದಿಗೆ ಚಾಲನೆ ನೀಡಲಾಗಿತ್ತು. ಇದರ ಜೊತೆಗೆ ದಾನಿಗಳು ಮತ್ತಿತರರು ಆರ್ಥಿಕ ಸಹಕಾರ ನೀಡಿದ್ದಾರೆ. ಜೀವಜಲ ಉಳಿಸುವ ಇಂತಹ ಕೆಲಸಗಳಿಗೆ ಗ್ರಾಮಸ್ಥರು ಕೈಜೋಡಿಸಬೇಕು. ಎಲ್ಲ ಕೆಲಸವನ್ನು ಸರ್ಕಾರವೇ ಮಾಡುತ್ತದೆ ಎಂದುಕೊಳ್ಳದೆ ನಮ್ಮ ಸಹಭಾಗಿತ್ವ ಪ್ರದರ್ಶಿಸಬೇಕು ಎಂದರು.
ರಾಜಮಹಾರಾಜರ ಕಾಲದಿಂದಲೂ ಕೆರೆಕಟ್ಟೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕೆರೆ ಒತ್ತುವರಿ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಉಳ್ಳೂರು ಕೆರೆಯನ್ನೂ ಅಭಿವೃದ್ಧಿಪಡಿಸುವ ಚಿಂತನೆಯಿದೆ ಎಂದು ತಿಳಿಸಿದರು.
ಎಲ್.ಆರ್.ಸುಬ್ರಾಯ, ದತ್ತಾತ್ರೇಯ ಹೆಗಡೆ, ಎಂ.ಜಿ.ಚಂದ್ರಶೇಖರ್, ಪೂರ್ಣಿಮಾ, ಕೆ.ಜಿ.ಉಲ್ಲಾಸ್, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಎಲ್.ಎಂ.ಲಕ್ಷ್ಮೀನಾರಾಯಣ, ಸೈಯದ್ ಜಾಕೀರ್, ಜಯರಾಮ್ ಇತರರಿದ್ದರು.