ಶಿಕಾರಿಪುರದಲ್ಲಿ ಆಯೋಜಿಸಿದ್ದ ಸಿಂಧೂರ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ರೇಣುಕಮ್ಮ, ದೀಪಾ, ಸ್ವಾತಿ, ಅರವಿಂದ್ ಇತರರಿದ್ದರು.
ಶಿಕಾರಿಪುರ: ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಪ್ರಾಮುಖ್ಯತೆ ನೀಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶ್ವಕರ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಿಂಧೂರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಕುಟುಂಬದ ಕಾರ್ಯಗಳಲ್ಲಿ, ವೃತ್ತಿಯಲ್ಲಿ ಸದಾ ನಿರತರಾಗಿರುತ್ತೀರಿ. ನಿಮ್ಮ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು ಎಂದು ತಿಳಿಸಿದರು.
ಆಪರೇಷನ್ ಸಿಂಧೂರ ನಮ್ಮ ದೇಶದ ಶಕ್ತಿ ಸಾಮರ್ಥ್ಯದ ಸಾಕ್ಷಿರೂಪ. ನಮ್ಮ ಸೈನಿಕ ಬಲ ಅದ್ಭುತವಾಗಿದೆ. ಶತ್ರುದಮನಕ್ಕೆ ನಮ್ಮ ಸೈನ್ಯ ಸದಾ ಸಿದ್ಧವಾಗಿರುತ್ತದೆ. ಕೇಂದ್ರ ಸರ್ಕಾರವು ಭಾರತದ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನೆ ಕೂರುವುದಿಲ್ಲ ಎಂಬುದು ಸಾಬೀತಾಗಿದೆ ಎಂದರು.
ರೇಣುಕಮ್ಮ, ದೀಪಾ, ಸ್ವಾತಿ, ಅರವಿಂದ್, ಪಾಲಾಕ್ಷಪ್ಪ, ಚನ್ನವೀರಪ್ಪ, ವೀರನಗೌಡ ಇತರರಿದ್ದರು.