ಯಗಟಿ ಸರ್ಕಾರಿ ಶಾಲೆ ಮಕ್ಕಳಿಗೆ ಮಾಜಿ ಶಾಸಕ ವೈಎಸ್‌ವಿ ದತ್ತ ಶಾಲಾ ಬ್ಯಾಗ್ ಮತ್ತು ಪಠ್ಯ ಪರಿಕರಗಳನ್ನು ವಿತರಿಸಿದರು. ಬಿದರೆ ಜಗದೀಶ್, ರವಿಪ್ರಕಾಶ್, ಡಿ.ಪ್ರಶಾಂತ್ ದೊಡ್ಡಯ್ಯ, ಮಂಜುನಾಥ್ ಮತ್ತಿತರಿದ್ದರು. 
ಶಿವಮೊಗ್ಗ

ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಾಥಮಿಕ ಶಿಕ್ಷಣ ಅಡಿಪಾಯ

ಕಡೂರು: ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಾಥಮಿಕ ಶಿಕ್ಷಣ ಗಟ್ಟಿ ಅಡಿಪಾಯ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ಯಗಟಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪರಿಕರ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಮತ್ತಷ್ಟು ಸಬಲೀಕರಣವಾಗಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರ್ಯಾಯವಾಗಿ ಕಲಿಕಾ ಗುಣಮಟ್ಟದಲ್ಲಿ ಸುಧಾರಣೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಈಗಾಗಲೇ ಸರ್ಕಾರಿ ರಂಗದ ಶಾಲಾ ಕಾಲೇಜುಗಳಲ್ಲಿ ಕಲಿತು ಸಾಮಾಜಿಕವಾಗಿ ಅತ್ಯುನ್ನತ ಸ್ಥಾನಗಳಿಸಿರುವ ಹಲವಾರು ನಿರ್ದಶನಗಳಿವೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯರ ನಿರಾಸಕ್ತಿ ಲವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಹಿನ್ನಡೆ ಕಂಡು ಬರುತ್ತಿರುವುದು ವಿಷಾದನೀಯ. ಬಡ ಮತ್ತು ಮಧ್ಯಮ ವರ್ಗದವರ ಪಾಲಿಗೆ ಸರ್ಕಾರಿ ಶಾಲೆಗಳು ವರದಾನವಾಗಿದೆ. ಪಾಲಕರಲ್ಲಿ ಅತಿಯಾದ ಆಂಗ್ಲ ವ್ಯಾಮೋಹ ಇದಕ್ಕೆ ಪೂರಕ ಕಾರಣ ಎಂದರು.
ತಮ್ಮ ಹಿರಿಯ ಸಹೋದರಿ ದಿ.ವಿಜಯಲಕ್ಷ್ಮೀ ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ ಶಾಲೆಯ 101 ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪರಿಕರ ವಿತರಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೊಡ್ಡಯ್ಯ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್, ಮುಖ್ಯಶಿಕ್ಷಕ ಮಂಜುನಾಥ, ಶಿಕ್ಷಕರಾದ ಮಂಜುಳಾ, ಗಿರಿಜಮ್ಮ, ವೈ.ಎಸ್.ರವಿಪ್ರಕಾಶ್, ಡಿ.ಪ್ರಶಾಂತ್, ರಾಜಲಕ್ಷ್ಮೀ , ಪದ್ಮಜಾ, ಮೋಹನ್ ಕುಮಾರ್, ಗಣೇಶ್ ಇದ್ದರು.