ಮಾದಕ ವಸ್ತುಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಶಾಶ್ವತಿ ಮಹಿಳಾ ವೇದಿಕೆ ಪದಾಧಿಕಾರಿಗಳು ಎಸ್ಪಿ ಕಚೇರಿ ಎದುರು ಪ್ರತಿಭಟಿಸಿದರು. ಡಾ. ಶಾಂತಾ ಸುರೇಂದ್ರ, ಸುಮಾ, ಶಿಲ್ಪಾ, ಸುಮಾ, ಚೈತ್ರಾ, ಚಂದ್ರಮತಿ ಹೆಗಡೆ ಇತರರಿದ್ದರು.
- ಶಾಶ್ವತಿ ಮಹಿಳಾ ಸಂಘದ ಆಗ್ರಹ
- ಎಸ್ಪಿ ಕಚೇರಿ ಎದುರು ಪ್ರತಿಭಟಿಸಿದ ಮಹಿಳೆಯರು
ಶಿವಮೊಗ್ಗ: ಗಾಂಜಾ ಸೇರಿ ಮಾದಕ ವಸ್ತುಗಳ ತಡೆಗೆ ಪೊಲೀಸ್ (police) ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಾಶ್ವತಿ (shashwati) ಮಹಿಳಾ ವೇದಿಕೆ ಸದಸ್ಯರು ಗುರುವಾರ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ (protest) ನಡೆಸಿದರು.
ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶಾಲೆಗಳ ಹತ್ತಿರವಿರುವ ಖಾಲಿ ಜಾಗಗಳಲ್ಲಿ ಯಾವುದೇ ಜೂಜಾಟಕ್ಕೆ ಅವಕಾಶ ಕೊಡಬಾರದು. ಗಾಂಜಾ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಹಿಳಾ ವೇದಿಕೆ ಅಧ್ಯಕ್ಷೆ ಡಾ. ಶಾಂತಾ ಸುರೇಂದ್ರ, ಪ್ರಮುಖರಾದ ಶಿಲ್ಪಾ ಸತೀಶ್, ಸುಮಾ, ದೀಪಾ, ಚೈತ್ರಾ, ಶೋಭಾ, ಚಂದ್ರಮತಿ ಹೆಗಡೆ, ಪುಷ್ಪಾ, ದೀಪಾ ಮಂಜುನಾಥ್ ಇತರರಿದ್ದರು.