ಪತ್ರಿಕಾ ದಿನಾಚರಣೆ(Press Day), ರಕ್ತದಾನ ಶಿಬಿರ, ಹಿರಿಯ ಪತ್ರಕರ್ತರಿಗೆ ಸನ್ಮಾನ, ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮವನ್ನು ಆ.2ರಂದು ಬೆಳಗ್ಗೆ 10ಕ್ಕೆ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಯು.ವೈದ್ಯನಾಥ್ ಹೇಳಿದರು.
ಪುರಸ್ಕಾರ ವಿತರಿಸಲಿದ್ದು, ಪತ್ರಿಕೋದ್ಯಮದ ಇಂದಿನ ಸವಾಲುಗಳು ಹಾಗೂ ಭವಿಷ್ಯದ ಅವಕಾಶಗಳ
ಕುರಿತು ದಿಕ್ಸೂಚಿ ಭಾಷಣ ಮಾಡುವರು. ಸಂಘದ ರಾಜ್ಯ ನಿರ್ದೇಶಕ ಕೆ.ವಿ.ಶಿವಕುಮಾರ್ ಹಾಗೂ
ಎನ್.ರವಿಕುಮಾರ್ ಭಾಗವಹಿಸುವರು ಎಂದರು.
ದತ್ತಿ ಪ್ರಶಸ್ತಿಗೆ ಆಯ್ಕೆಯಾದ ವಿಜಯವಾಣಿ ಮುಖ್ಯ ವರದಿಗಾರ ಶ್ರೀಕಾಂತ್ ಭಟ್(Vijayavani Chief Reporter Shrikant Bhat), ಶಿವಮೊಗ್ಗದ
ಹೊಸದಿಗಂತ ಸ್ಥಾನಿಕ ಸಂಪಾದಕ ವಾದಿರಾಜ ಕಮರೂರು, ಭದ್ರಾವತಿಯ ಹಿರಿಯ ಪತ್ರಕರ್ತ ಕಣ್ಣಪ್ಪ
ಅವರನ್ನು ಗೌರವಿಸಲಾಗುವುದು. ವಿಜಯವಾಣಿ ಸೊರಬ ವರದಿಗಾರ ಶಿವಪ್ಪ ಹಿತ್ಲರ್, ಹಿರಿಯ
ಪತ್ರಕರ್ತರಾದ ಅರಹತೊಳಲು ಕೆ. ರಂಗನಾಥ್, ನಾಗರಾಜ್ ಕಲ್ಕೊಪ್ಪ, ರಘು ಕುಮಾರ್,
ಟಿ.ಎಸ್.ಆನಂದ್‌ಕುಮಾರ್, ರಾಮಚಂದ್ರ ಕೊಪ್ಪಲು, ಕೆ.ಎಚ್.ಹುಚ್ಚರಾಯಪ್ಪ, ರಾಜೇಶ್ ಭಡ್ತಿ,
ಪಿ.ಎನ್.ನರಸಿಂಹಮೂರ್ತಿ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಪ್ರೇರಣಾ ಕೆ. ರಾವ್, ಡಾ. ಕೆ.ಎಸ್.ಲಲಿತೇಶ್ವರಿ, ಎನ್.ಸಾನ್ವಿ ಹಾಗೂ ಕ್ರೀಡಾ ಕ್ಷೇತ್ರದ ಸಾಧನೆಗಾಗಿ
ಎ.ಎನ್.ರಕ್ಷಾ ಅವರಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು. ಸಂಘದ
ಉಪಾಧ್ಯಕ್ಷರಾದ ಕೆ.ಸತ್ಯನಾರಾಯಣ, ಕೆ.ಎಸ್.ಹುಚ್ರಾಯಪ್ಪ, ಪ್ರಧಾನ ಕಾರ್ಯದರ್ಶಿ
ಆರ್.ಎಸ್.ಹಾಲಸ್ವಾಮಿ, ನಿರ್ದೇಶಕ ನಾಗರಾಜ್ ಶೆಣೈ ಸುದ್ದಿಗೋಷ್ಠಿಯಲ್ಲಿದ್ದರು.